Sunday, June 29, 2025
spot_imgspot_img
spot_imgspot_img

ವಾಲ್ಮಿಕಿ ನಿಗಮ ಹಗರಣ; ನಾಗೇಂದ್ರ ಆಪ್ತರ ಮನೆಗಳ ಮೇಲೆ ಇಡಿ ದಾಳಿ..!

- Advertisement -
- Advertisement -

ಬಳ್ಳಾರಿ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ‌ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ ಆಪ್ತರ ಮನೆ ಮೇಲೆ ಬುಧವಾರ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರಿನಲ್ಲಿ ಏಕಕಾಲಕ್ಕೆ ಇ.ಡಿ ದಾಳಿ ನಡೆಸಿದೆ. ನಾಗೇಂದ್ರ ಆಪ್ತ ಸಂಬಂಧಿ ಎರ್ರಿಸ್ವಾಮಿ ಮನೆ ಸೇರಿದಂತೆ ಕೆಲ ಸಹಾಯಕರು ಹಾಗೂ ಆಪ್ತರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪ್ರಕರಣದಲ್ಲಿ ಇಡಿ ಜಾರ್ಜ್​​ಶೀಟ್ ಸಲ್ಲಿಕೆಗೆ ಸಮಯ ಹತ್ತಿರ ಬಂದಿರುವುದರಿಂದ ಅಧಿಕಾರಿಗಳು ದಾಳಿ ಚುರುಕುಗೊಂಡಿದೆ.

ಇನ್ನು ನಾಗೇಂದ್ರ ಆಪ್ತ ವಿಜಯ ಕುಮಾರ್ ಮನೆ ಮೇಲೂ ಇ.ಡಿ ದಾಳಿ ನಡೆಸಿದೆ. ಬಳ್ಳಾರಿಯಲ್ಲಿ ನಾಗೇಂದ್ರ ಅವರ ಒಟ್ಟು ನಾಲ್ಕು ಜನ ಅಪ್ತರ ಮನೆಯ ಮೇಲೆ ಇ.ಡಿ ದಾಳಿಯಾಗಿದೆ.

- Advertisement -

Related news

error: Content is protected !!