Friday, June 5, 2026
spot_imgspot_img
spot_imgspot_img

ಬಂಟ್ವಾಳ ಪುರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್‌ನ ವಾಸು, ಉಪಾಧ್ಯಕ್ಷರಾಗಿ ಎಸ್.ಡಿ.ಪಿ.ಐನ ಮುನೀಶ್

- Advertisement -
- Advertisement -

ಬಂಟ್ವಾಳ : ಪುರಸಭಾ ಅಧ್ಯಕ್ಷರಾಗಿ ವಾಸು ಪೂಜಾರಿ ಲೊರೆಟ್ಟೆ ಹಾಗೂ ಉಪಾಧ್ಯಕ್ಷರಾಗಿ ಎಸ್.ಡಿ.ಪಿ.ಐ ನ ಮುನೀಶ್ ಆಲಿ ಆಯ್ಕೆಯಾಗಿದ್ದಾರೆ.

ಪುರಸಭಾ ಒಟ್ಟು 27 ಸ್ಥಾನಗಳ ಪೈಕಿ 1 ಸ್ಥಾನ ತೆರವಾಗಿದ್ದು, ಬಿಜೆಪಿಯ 11 ಸ್ಥಾನ, ಕಾಂಗ್ರೆಸ್‌ನ 11 ಹಾಗೂ ಎಸ್.ಡಿ.ಪಿ.ಐ ನ 4 ಸ್ಥಾನ ಹೊಂದಿತ್ತು. ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ, ಬಂಟ್ವಾಳ ಶಾಸಕ ರಾಜೇಶ್ ನಾಯ್ ಉಳಿಪ್ಪಾಡಿಗುತ್ತು ಚುನಾವಣೆಯಲ್ಲಿ ಪಾಲ್ಗೊಂಡಿದ್ದು, ಬಿಜೆಪಿ ಸ್ಥಾನ 13ಕ್ಕೆ ಏರಿತ್ತು.

ಕಾಂಗ್ರೆಸ್‌ನ ವಾಸು ಪೂಜಾರಿ ಅವರಿಗೆ ಎಸ್.ಡಿ.ಪಿ.ಐ ಬೆಂಬಲಿಸಿದ್ದು, ಉಪಾಧ್ಯಕ್ಷ ಸ್ಥಾನದ ಎಸ್.ಡಿ.ಪಿ.ಐನ ಮುನೀಶ್ ಆಲಿಗೆ ಕಾಂಗ್ರೆಸ್ ಬೆಂಬಲ ನೀಡಿದೆ. ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಎ.ಗೋವಿಂದ ಪ್ರಭು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹರಿಪ್ರಸಾದ್ ಸ್ಪರ್ಧಿಸಿದ್ದರು.

- Advertisement -

Related news

error: Content is protected !!