- Advertisement -
- Advertisement -
ಮಂಗಳೂರು:-ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಶಿಲನ್ಯಾಸ ನಡೆಯುವ ಸಂದರ್ಭದಲ್ಲಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ವ್ಯಾಪ್ತಿಯ ಎಲ್ಲಾ ಬಂಧುಗಳೂ ತಮ್ಮ ಮನೆಯಲ್ಲೇ ಸಂಭ್ರಮಾಚರಿಸುವಂತೆ ಶಾಸಕ ವೇದವ್ಯಾಸ್ ಕಾಮತ್ ಮನವಿ ಮಾಡಿದ್ದಾರೆ.
ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಂದಿರ ನಿರ್ಮಾಣ ಕಾರ್ಯಕ್ಕೆ ಶಿಲನ್ಯಾಸ ನೆರವೇರಿಸುವ ಪ್ರಯುಕ್ತ ತಮ್ಮ ಮನೆಯಲ್ಲಿಯೇ ಕೋವಿಡ್ 19 ಸುರಕ್ಷಾ ನಿಯಮಗಳನ್ನು ಪಾಲಿಸುತ್ತಾ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳಬೇಕು. ಶಿಲಾನ್ಯಾಸದ ನೇರಪ್ರಸಾರವನ್ನು ಸಾಮಾಜಿಕ ಜಾಲತಾಣ ಅಥವ ಟಿವಿ ಮಾಧ್ಯಮಗಳ ಮೂಲಕ ವೀಕ್ಷಿಸುವ ಮೂಲಕ ಸಂಭ್ರಮ ಆಚರಿಸಬೇಕು.
ಕಾರ್ಯಕರ್ತರು ಬಹಿರಂಗ ಮೆರವಣಿಗೆ ಮಾಡಬಾರದು. ಸಾಮಾಜಿಕ ಅಂತರ ಕಾಯ್ದುಕೊಂಡು ಮಂದಿರ ನಿರ್ಮಾಣ ಕಾರ್ಯದ ಸಂತಸ ಹಂಚೋಣ. ಕೋವಿಡ್ 19 ವಿರುದ್ಧ ಒಂದಾಗಿ ಹೋರಾಡೋಣ ಎಂದು ಶಾಸಕ ವೇದವ್ಯಾಸ್ ಕಾಮತ್ ಮನವಿ ಮಾಡಿಕೊಂಡಿದ್ದಾರೆ.
- Advertisement -