Sunday, June 29, 2025
spot_imgspot_img
spot_imgspot_img

ವೀರಕಂಭ: ಕೆಲಿಂಜ ಸ.ಹಿ.ಪ್ರಾ.ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಬಿ.ತಿಮ್ಮಪ್ಪ ನಾಯ್ಕರವರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ

- Advertisement -
- Advertisement -

ವೀರಕಂಭ ಗ್ರಾಮದ ಕೆಲಿಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರು ಬಿ ತಿಮ್ಮಪ್ಪ ನಾಯ್ಕರವರು ಈ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಮುಚ್ಚುವ ಹಂತದಲ್ಲಿದ್ದ ಸರಕಾರಿ ಕೆಲಿಂಜ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳನ್ನು ಒಟ್ಟು ಸೇರಿಸಿ ಕೇವಲ ಎರಡೇ ವರ್ಷದಲ್ಲಿ 22 ಇದ್ದ ಮಕ್ಕಳ ಸಂಖ್ಯೆಯನ್ನು 95 ಕ್ಕೆ ತಲುಪಿಸಿದ ಶ್ರಮ ಇವರದ್ದು. ರಾಜ್ಯ ಮಟ್ಟದ ಕ್ರೀಡಾಪಟುವಾದ ಇವರು ರಂಗಭೂಮಿ ಕಲಾವಿದ, ನ್ಲತ್ಯಗಾರ, ಜೇನು ಕೃಷಿಕನಾಗಿ ಶಿಕ್ಷಕ ವ್ಲತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಮಕ್ಕಳಿಗೂ ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರೋತ್ಸಾಹ ನೀಡುತ್ತಾ, ಶೈಕ್ಷಣಿಕ ಕ್ಷೇತ್ರದಲ್ಲಿ ಮಾದರಿಯಾಗಿ ಸೇವೆ ಸಲ್ಲಿಸಿದರವರು.

ರಕ್ತದಾನ ಶ್ರೇಷ್ಠ ದಾನ ಎಂಬAತೆ 24 ಬಾರಿ ರಕ್ತದಾನ ಗೈದು ಹಲವಾರು ಜೀವಗಳ ಬಾಳಿಗೆ ಬೆಳಕಾದವರು. ಇವರ ಶೈಕ್ಷಣಿಕ ಸೇವೆಯನ್ನು ಗುರುತಿಸಿ ಈ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

- Advertisement -

Related news

error: Content is protected !!