Saturday, May 11, 2024
spot_imgspot_img
spot_imgspot_img

ವೀರಕಂಭ: (ಡಿ.31)ಕೇಸರಿ ಫ್ರೆಂಡ್ಸ್ ಕೆಲಿಂಜ ಇದರ ದಶಮಾನೋತ್ಸವದ ಪ್ರಯುಕ್ತ ಬಂಟ್ವಾಳ ತಾ.ಅಮೆಚೂರ್ ಅಸೋಸಿಯೇಶನ್ ಇದರ ಆಶ್ರಯದಲ್ಲಿ ಆಹ್ವಾನಿತ ಪುರುಷರ ವಿಭಾಗದ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ

- Advertisement -G L Acharya panikkar
- Advertisement -
This image has an empty alt attribute; its file name is baby-sitting-new-853x1024.jpeg

ವೀರಕಂಭ: ಕೇಸರಿ ಫ್ರೆಂಡ್ಸ್ ಕೆಲಿಂಜ ಇದರ ದಶಮಾನೋತ್ಸವದ ಪ್ರಯುಕ್ತ ಬಂಟ್ವಾಳ ತಾ.ಅಮೆಚೂರ್‍ ಅಸೋಸಿಯೇಶನ್ ಇದರ ಆಶ್ರಯದಲ್ಲಿ ಆಹ್ವಾನಿತ ಪುರುಷರ ವಿಭಾಗದ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಡಿ.31 ರಂದು ಬೆಳಿಗ್ಗೆ ಗಂಟೆ 10ಕ್ಕೆ ಕೆಲಿಂಜ ಶ್ರೀ ಉಳ್ಳಾಲ್ತಿ ದೈವಸ್ಥಾನದ ವಠಾರದ ಕ್ಯಾಪ್ಟನ್ ಪ್ರಾಂಜಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಕೆಲಿಂಜ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶಂಕರನಾರಾಯಣ ಭಟ್ ಪುಂಡಿಕಾಯಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದ.ಕ ಸಂಸದ ನಳಿನ್ ಕುಮಾರ್ ಕಟೀಲ್, ಬಂಟ್ವಾಳ ಶಾಸಕ ರಾಜೇಶ್ ನಾೖಕ್‌ ಉಳಿಪ್ಪಾಡಿಗುತ್ತು, ನಿವೃತ್ತ ಸೈನಿಕ ಕ್ಯಾಪ್ಟನ್ ಬ್ರಿಜೇಶ್ ಚೌಟ, ನೇರಳಕಟ್ಟೆ ಸಹಕಾರಿ ವ್ಯವಸಾಯಿಕ ಬ್ಯಾಂಕ್‌ನ ಪುಷ್ಪರಾಜ್ ಚೌಟ ಮಾಣಿ, ದ.ಕ.ಜಿಲ್ಲಾ ಬಿ.ಜೆ.ಪಿ ಮಾಧ್ಯಮ ಪ್ರಮುಖ್ ಸಂದೇಶ್ ಶೆಟ್ಟಿ ಅರೆಬೆಟ್ಟು, ತಾ.ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಧವ ಮಾವೆ, ಪುಣಚ ಬಿ.ಜೆ.ಪಿ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜಿರೆಮಾರ್‍, ಮಂಗಳೂರು ಯುವ ಉದ್ಯಮಿ ಪ್ರೀತೆಶ್ ಅಂಚನ್, ಲೋಲಾಕ್ಷ ನೆತ್ತೆರ್‌ಕೆರೆ ಸಿವಿಲ್ ಇಂಜಿನಿಯರ್, ಕಾರ್ತಿಕ್ ಉದ್ಯಮಿಗಳು ಮಂಗಳೂರು, ಭರತ್ ರಾಜ್ ಮುಂಡೋಳಿ ಉದ್ಯಮಿಗಳು, ಲತೇಶ್ ಶೆಟ್ಟಿ ನ್ಯಾಯವಾದಿಗಳು ಮಂಗಳೂರು, ವಿಟ್ಲ ಜೇಸಿಐ ಅಧ್ಯಕ್ಷ ಜೇಸಿ ಸಂತೋಷ್ ಶೆಟ್ಟಿ ಪೆಲತ್ತಡ್ಕ, ಕೆಲಿಂಜ ಹಿಂದೂ ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ಚೇತನ್ ಶೆಟ್ಟಿ ಪೆಲತ್ತಡ್ಕ, ಪದ್ಮನಾಭ ಪೂಜಾರಿ ಅಳಿಕೆ ವಕೀಲರು ಬಿ.ಸಿ ರೋಡ್, ಸಂತೋಷ್ ಶೆಟ್ಟಿ ಅನೆಯಾಲಗುತ್ತು, ಕೆಲಿಂಜ ಅರಣ್ಯ ಪಾಲಕ ಶೋಭಿತ್ ಕುಮಾರ್, ಉಮೇಶ್ ಪೂಜಾರಿ ಪಡೀಲ್ ಉದ್ಯಮಿಗಳು, ಪ್ರದೀಪ್ ಶೆಟ್ಟಿ ಕುಡ್ಪಲ್ತಡ್ಕ ಉದ್ಯಮಿಗಳು, ಪ್ರಶಾಂತ ಗೌಡ ಬನ ಕಡಂಬು ಉದ್ಯಮಿಗಳು, ಕೆಲಿಂಜ ಶಾಲೆ ಮುಖ್ಯೋಪಾಧ್ಯಾಯರು ತಿಮ್ಮಪ್ಪ ನಾಯ್ಕ, ಜೀವ ವಿಮೆ ಎಮ್.ಡಿ.ಆರ್‍.ಟಿ ಪ್ರತಿನಿಧಿ ಕಾಮಧೇನು ಟ್ರೇಡರ್‍ಸ್ ಮಂಗಳಪದವುನ ಚಿತ್ತರಂಜನ್ ಯನ್.ಎಸ್.ಡಿ, ವೀರಕಂಭ ಪಂಚಾಯತ್ ಮಾಜಿ ಅಧ್ಯಕ್ಷ ದಿನೇಶ್ ಪೂಜಾರಿ ವೀರಕಂಭ, ವೀರಕಂಭ ಪಂಚಾಯತ್ ಸದಸ್ಯ ಜಯಪ್ರಸಾದ್ ಶೆಟ್ಟಿ ಕಲ್ಮಲೆ, ವೀರಕಂಭ ಪಂಚಾಯತ್ ಸದಸ್ಯ ಉಮಾವತಿ ಸಪಲ್ಯ ಭಾಗವಹಿಸಲಿದ್ದಾರೆ.

ಬಹುಮಾನವಾಗಿ ಪ್ರಥಮ ರೂ.15,000/- ಹಾಗೂ ಕೇಸರಿ ಟ್ರೋಫಿ, ದ್ವಿತೀಯ ರೂ.10,000/- ಹಾಗೂ ಕೇಸರಿ ಟ್ರೋಫಿ, ತೃತೀಯ ರೂ.5,000/- ಹಾಗೂ ಕೇಸರಿ ಟ್ರೋಫಿ, ಚತುರ್ಥ ರೂ.5000/- ಹಾಗೂ ಕೇಸರಿ ಟ್ರೋಫಿ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!