Saturday, May 15, 2021
spot_imgspot_img
spot_imgspot_img

ವೀರಕಂಭ: ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಮಜಿಯಲ್ಲಿ ನಡೆದ ಕೋವಿಡ್ ಲಸಿಕಾ ಶಿಬಿರ

- Advertisement -
- Advertisement -

ಕಲ್ಲಡ್ಕ: ಆರೋಗ್ಯದ ವಿಚಾರವಾಗಿ ಯಾವುದೇ ರೀತಿಯ ಉದಾಸೀನ ಸಲ್ಲದು. ಸರಕಾರದ ವ್ಯವಸ್ಥೆಯು ಪ್ರತಿ ಹಂತದಲ್ಲೂ ನಿಧಿ೯ಷ್ಟತೆಯನ್ನು ಹೊಂದಿದ್ದು ಪಾರದಶ೯ಕತೆಯನ್ನು ತೋರುತ್ತದೆ.

45 ವಷ೯ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ನೀಡುವ ಕೊರೋನಾ ಲಸಿಕೀಕರಣದ ಉದ್ದೇಶವೇ ಆರೋಗ್ಯ ಮತ್ತು ಸಧೃಢ ಸಮಾಜದ ನಿಮಾ೯ಣವಾಗಿದೆ. ಇದರ ಸದುಪಯೋಗ ಎಲ್ಲರೂ ಪಡೆದು ಆರೋಗ್ಯವಂತರಾಗಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರ ವಿಟ್ಲ ಇಲ್ಲಿನ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಶ್ರೀಮತಿ ಕುಸುಮಾರವರು ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಮಜಿ ವೀರಕಂಭ ಇಲ್ಲಿ ದ.ಕ.ಜಿ.ಪಂ., ಜಿಲ್ಲಾ ಆರೋಗ್ಯ ಕೇಂದ್ರ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ ವಿಟ್ಲ, ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿ ಗ್ರಾ.ಪಂ.ವೀರಕಂಭ ಹಾಗೂ ವೀರಕಂಭ ಗ್ರಾಮದ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ನಡೆದ ಕೋವಿಡ್ ಲಸಿಕಾ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕ ಶ್ರೀಯುತ ನಾರಾಯಣ ಪೂಜಾರಿ ಅವರಿಗೆ ಪ್ರಥಮ ಲಸಿಕೆ ನೀಡುವ ಮೂಲಕ ವಿಟ್ಲ ಸಮುದಾಯ ಆರೋಗ್ಯಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಜ್ಯೋತಿ ಕೆ. ಎನ್, ಉದ್ಘಾಟಿಸಿದರು.

driving


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ವಹಿಸಿದ್ದರು .
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್, ಸದಸ್ಯ ರಾದ ಶ್ರೀಮತಿ ಮೀನಾಕ್ಷಿ, ಜಯಪ್ರಸಾದ್,ಸಂದೀಪ್ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂಜೀವ ಮೂಲ್ಯ, ಧ.ಗ್ರಾ.ಯೋ.ವೀರಕಂಬ ಒಕ್ಕೂಟದ ಅಧ್ಯಕ್ಷ ಕೊರಗಪ್ಪ ನಾಯ್ಕ್, ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯರಾದ ಇಂದಿರಾ ನಾಯ್ಕ್, ಕಿರಿಯ ಆರೋಗ್ಯ ಸಹಾಯಕಿ ಕೀರ್ತಿ ಎ ಆರ್,ಆಶಾ ಕಾಯ೯ಕತೆ೯ಯರಾದ ಲೀಲಾವತಿ, ಕೋಮಲಾಕ್ಷಿ,ಸ್ನೇಹಲತಾ, ಶಶಿಕಲಾ, ಹಾಗೂ ಶಿಕ್ಷಕವೃಂದದವರು ಭಾಗವಹಿಸದ್ದರು. ಶಿಕ್ಷಕಿ ಸಂಗೀತ ಶರ್ಮ ಸ್ವಾಗತಿಸಿ, ಶಿಕ್ಷಕಿ ಮೂಷೀ೯ದಾ ಬಾನು ವಂದಿಸಿದರು.

- Advertisement -
- Advertisement -

MOST POPULAR

HOT NEWS

Related news

error: Content is protected !!