

ವೀರಕಂಭ: ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಮಡಿವಾಳ ಕೋಡಿ ತಿರ್ತ ಕೆಲಿಂಜ ಎಂಬಲ್ಲಿ ದೈವಜ್ಞ ರತ್ನ ಬ್ರಹ್ಮ ಶ್ರೀ ಒಳಕುಂಜ ವೆಂಕಟರಮಣ ಭಟ್ಟರ ಹಾಗೂ ಮುರಳೀ ಶ್ರೀಕೃಷ್ಣ ಭಟ್ಟರ ನೇತೃತ್ವದಲ್ಲಿ ಮೇ.4 ನೇ ಆದಿತ್ಯವಾರದಿಂದ ಅಷ್ಟಮಂಗಲ ಪ್ರಶ್ನಾ ಚಿಂತನೆ ಧರ್ಮಸಭೆ ನಡೆಯಲಿದೆ.

ಈ ಸ್ಥಳದಲ್ಲಿ ದೈವಜ್ಞರ ಮುಖೇನ ತಾಂಬೂಲ ಪ್ರಶ್ನೆ ಇಟ್ಟಾಗ ಆ ಪುಣ್ಯ ಮಣ್ಣಿನಲ್ಲಿ ಈ ಹಿಂದೆ ದೈವಗಳ ಸಾನಿಧ್ಯಗಳು ನಾಶಗೊಂಡ ಬಗ್ಗೆ ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದಿದ್ದು ಮುಂದಕ್ಕೆ ದೈವಜ್ಞರು ಅಷ್ಟಮಂಗಲ ಪ್ರಶ್ನಾ ಚಿಂತನೆಗೆ ಸೂಚಿಸಿದ ಕಾರಣ ತಿರ್ತ ಕೆಲಿಂಜದ ಮಣ್ಣಿನಲ್ಲಿ ಎಷ್ಟು ವರ್ಷಗಳ ಪೂರ್ವದಲ್ಲಿ ಭೂಗರ್ಭದಲ್ಲಿ ಹುದುಗಿಹೋದ ದೈವಗಳ ಸಾನಿಧ್ಯಗಳ ಸತ್ಯ ಅನ್ವೇಷಣೆಗೆ ಹಾಗೂ ನಾಶಗೊಂಡ ಬಗ್ಗೆ ಕಾರಣಗಳನ್ನು ತಿಳಿಯಲು ಮತ್ತು ಪುನರ್ ಪ್ರತಿಷ್ಠಾಪಿಸಲು ಮುಖ್ಯವಾಗಿ ಗ್ರಾಮದ ಮಲರಾಯ ದೈವ ಪ್ರಶ್ನಾ ಚಿಂತನೆಗೆ ಅಪ್ಪಣೆಯನ್ನು ನೀಡಲಾಗಿತ್ತು. ಪ್ರಯುಕ್ತ ದೈವಜ್ಞ ರತ್ನ ಬ್ರಹ್ಮಶ್ರೀ ವಳಕುಂಜ ವೆಂಕಟರಮಣ ಭಟ್ಟರ ಹಾಗೂ ದೈವಜ್ಞ ಡಾ. ಬ್ರಹ್ಮಶ್ರೀ ಮುರಳೀ ಶ್ರೀಕೃಷ್ಣ ನೇತೃತ್ವದಲ್ಲಿ ದಿನಾಂಕ 4-5-2025ನೇ ಆದಿತ್ಯವಾರದಿಂದ ಅಷ್ಟಮಂಗಲ ಪ್ರಶ್ನಾ ಚಿಂತನೆ ಧರ್ಮಸಭೆ ನಡೆಯಲಿದೆ.
ತಿರ್ತ ಕೆಲಿಂಜದ ಪುಣ್ಯ ಮಣ್ಣಿನಲ್ಲಿ ನಡೆಯಲಿರುವ ಅಷ್ಟಮಂಗಲ ಪ್ರಶ್ನಾ ಚಿಂತನೆ ಧರ್ಮಸಭೆಯಲ್ಲಿ ತಾವೆಲ್ಲರೂ ಭಾಗವಹಿಸಿ ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಗ್ರಾಮಸ್ಥರು ಹಾಗೂ ಹತ್ತು ಸಮಸ್ತರು ಹಾಗೂ ದೇಯಿ ಪೊಂಜೆ ಯಾನೆ ದೇವಂಜೆ ವಂಶಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.