Saturday, June 28, 2025
spot_imgspot_img
spot_imgspot_img

ವಿಟ್ಲ : ದ್ವಿಚಕ್ರ ವಾಹನ – ಖಾಸಗಿ ಬಸ್ ನಡುವೆ ಡಿಕ್ಕಿ; ಸವಾರ ಗಂಭೀರ..!

- Advertisement -
- Advertisement -

ವಿಟ್ಲ : ದ್ವಿಚಕ್ರ ವಾಹನ ಹಾಗೂ ಖಾಸಗಿ ಬಸ್ ನಡುವೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡ ಘಟನೆ ವಿಟ್ಲ-ಸಾಲೆತ್ತೂರು- ಮುಡಿಪು ರಸ್ತೆಯ ಕಟ್ಟತ್ತಿಲ ಎಂಬಲ್ಲಿ ನಡೆದಿದೆ.

ಗಂಭೀರ ಗಾಯಗೊಂಡ ಸವಾರ ಕಟ್ಟತ್ತಿಲ ನಿವಾಸಿ ಮುಝಂಬಿಲ್‌ ಎಂದು ಗುರುತಿಸಲಾಗಿದೆ.

ವಿಟ್ಲದಿಂದ ಮುಡಿಪು ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಮೆದು ಕಡೆ ತೆರಳುತ್ತಿದ್ದ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡಿದ್ದ ಯುವಕನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ದ್ವಿಚಕ್ರ ವಾಹನಕ್ಕೆ ಹಾನಿ ಉಂಟಾಗಿದೆ.

- Advertisement -

Related news

error: Content is protected !!