Tuesday, June 16, 2026
spot_imgspot_img
spot_imgspot_img

ತಮಿಳುನಾಡಿನ ರೈತರಿಗೆ ಸಿಹಿ ಸುದ್ದಿ- 75,000 ರೂ. ವರೆಗಿನ ಬೆಳೆ ಸಾಲ ಸಂಪೂರ್ಣ ಮನ್ನಾ

- Advertisement -
- Advertisement -

ಚೆನ್ನೈ: ಸಿಎಂ ಸಿ. ಜೋಸೆಫ್‌ ವಿಜಯ್‌ ತಮಿಳುನಾಡಿನ ವಿವಿಧ ಸಹಕಾರಿ ಬ್ಯಾಂಕುಗಳಲ್ಲಿ ರೈತರು ಪಡೆದಿರುವ 75,000 ರೂ. ವರೆಗಿನ ಬೆಳೆ ಸಾಲವನ್ನ ಸಂಪೂರ್ಣ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಇದರೊಂದಿಗೆ 75,000 ರೂ.ಗಿಂತಲೂ ಹೆಚ್ಚು ಬೆಳೆ ಸಾಲ ಪಡೆದವರಿಗೆ 35,000 ರೂ. ವರೆಗಿನ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ.

ಪರಿಷ್ಕೃತ ಯೋಜನೆಯ ಪ್ರಕಾರ, 2025 ರ ಮೇ 1 ರಿಂದ 2026 ರ ಫೆ.28 ರ ನಡುವೆ ಸಹಕಾರಿ ಬ್ಯಾಂಕುಗಳಿಂದ 75,000 ರೂ. ವರೆಗಿನ ಸಾಲ ಸಂಪೂರ್ಣ ಮನ್ನಾ ಆಗಲಿದ್ದು, ರಾಜ್ಯಾದ್ಯಂತ ಸುಮಾರು 14.43 ಲಕ್ಷಕ್ಕೂ ಹೆಚ್ಚು ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ. ಆದರೆ ಈ ಕ್ರಮದಿಂದ ಸರ್ಕಾರಕ್ಕೆ 5,932.23 ಕೋಟಿ ರೂ. ಹೊರೆಯಾಗಲಿದೆ.

ಒಟ್ಟು ಫಲಾನುಭವಿಗಳಲ್ಲಿ 75,000 ರೂ.ವರೆಗಿನ ಸಾಲ ಹೊಂದಿರುವ 6.22 ಲಕ್ಷಕ್ಕೂ ಹೆಚ್ಚು ರೈತರು ಸಂಪೂರ್ಣ ಮನ್ನಾ ಪ್ರಯೋಜನ ಪಡೆಯುತ್ತಾರೆ. ಅದಕ್ಕಿಂತಲೂ ಹೆಚ್ಚಿನ ಸಾಲ ಹೊಂದಿದವರಲ್ಲಿ 8.21 ಲಕ್ಷ ರೈತರ ಸಾಲ ತಲಾ 35,000 ರೂ. ಮನ್ನಾ ಆಗಲಿದೆ. ಇದು ಸಿಎಂ ವಿಜಯ್‌ ಸರ್ಕಾರ ಇದುವೆರೆಗೆ ಘೋಷಿಸಿದ ಅತಿದೊಡ್ಡ ರೈತ ಕಲ್ಯಾಣ ಕಾರ್ಯಕ್ರಮಗಳಲ್ಲಿ ಒಂದಾಗಿದೆ.

ರಾಜ್ಯದ ರೈತರ ಆರ್ಥಿಕ ಸ್ಥಿತಿ ಮತ್ತು ರೈತರ ಅಗತ್ಯಗಳನ್ನು ನಿರ್ವಹಿಸಲು ಈ‌ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಯೋಜನೆಯಡಿ ಸಹಕಾರಿ ಬ್ಯಾಂಕುಗಳಿಗೆ ಪಾವತಿಸಬೇಕಾದ ಪಾವತಿಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳಿಗೆ ಅನುಗುಣವಾಗಿ 45 ರಿಂದ 60 ದಿನಗಳಲ್ಲಿ ಇತ್ಯರ್ಥಪಡಿಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!