ಚೆನ್ನೈ: ಕನ್ನಡದ ಪ್ರತಿಭಾನ್ವಿತ ನಟಿ ವಿಜಯಲಕ್ಷ್ಮಿ ಚೆನ್ನೈನಲ್ಲಿ ಆತ್ಮಹತ್ಯಗೆ ಪ್ರಯತ್ನಿಸಿದ್ದಾರೆ. ಮಾತ್ರೆ ನುಂಗಿ ಆತ್ಮಹತ್ಯೆಗೆ ಪ್ರಯತ್ನಿಸುವ ಮುನ್ನ ವಿಡಿಯೋವೊಂದನ್ನು ಮಾಡಿರುವ ವಿಜಯಲಕ್ಷ್ಮಿ ಇದು ನನ್ನ ಕೊನೆಯ ವಿಡಿಯೋ ಇದಾದ ಮೇಲೆ ನಾನು ಬದುಕಿರೋಲ್ಲ ಎಲ್ಲರಿಗೂ ನನ್ನ ಅಂತಿಮ ನಮಸ್ಕಾರಗಳು ಅಂತಾ ಹೇಳಿ ಮಾತ್ರೆ ನುಂಗಿದ್ದಾರೆ.
ತಮ್ಮ ಸಾವಿಗೆ ಚೆನ್ನೆನಲ್ಲಿರುವ ಇಬ್ಬರು ವ್ಯಕ್ತಿಗಳು ಕಾರಣ, ಅವರು ನನಗೆ ವಿಪರೀತ ಕಾಟಕೊಡುತ್ತಿದ್ದಾರೆ. ನಾನು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದೇನೆಂದು ಸುಳ್ಳು ಆರೋಪ ಮಾಡಿ ಅಪಪ್ರಚಾರ ಮಾಡುತ್ತಿದ್ದಾರೆ. ಇವರೇ ನನ್ನ ಸಾವಿಗೆ ಕಾರಣ. ನನ್ನ ಅಭಿಮಾನಿಗಳೇ ಇವರನ್ನು ಬಿಡಬೇಡಿ ಎಂದು ವಿಡಿಯೋದಲ್ಲಿ ವಿಜಯಲಕ್ಷ್ಮಿ ತಮ್ಮ ನೋವು ತೋಡಿಕೊಂಡಿದ್ದಾರೆ. ನನ್ನ ಸಾವು ಎಲ್ಲರಿಗೂ ಕಣ್ಣು ತೆರೆಸುವ ಪಾಠವಾಗಬೇಕು ಎಂದು ತಮ್ಮ ಮನದ ನೋವು ತೋಡಿಕೊಂಡಿದ್ದಾರೆ. ಹೀಗೆ ವಿಡಿಯೋ ಮಾಡಿ ಸಾಕಷ್ಟು ಮಾತ್ರೆಗಳನ್ನು ನುಂಗಿ ನಟಿ ವಿಜಯಲಕ್ಷ್ಮಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದ್ರೆ ವಿಷಯ ತಿಳಿಯುತ್ತಿದ್ದಂತೆ ಮಾತ್ರೆ ನುಂಗಿದ್ದ ವಿಜಯಲಕ್ಷ್ಮಿಯವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.