Wednesday, October 21, 2026
spot_imgspot_img
spot_imgspot_img

ವಿಟ್ಲ: ಶ್ರೀ ಪತಂಜಲಿ ಯೋಗ ಶಿಕ್ಷಣ, ಕರ್ನಾಟಕ ಮಂಗಳೂರು ಮಹಾನಗರ ಇದರ ವಿಟ್ಲ ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಶಾಖೆ ಹಾಗೂ ಶ್ರೀ ಜಠಾಧಾರಿ ಶಾಖೆ ಕಾಶೀಮಠ ಇದರ ವತಿಯಿಂದ ಸಾಮೂಹಿಕ ಯೋಗ ದುರ್ಗಾ ನಮಸ್ಕಾರ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಶ್ರೀ ಪತಂಜಲಿ ಯೋಗ ಶಿಕ್ಷಣ, ಕರ್ನಾಟಕ ಮಂಗಳೂರು ಮಹಾನಗರ ಇದರ ವಿಟ್ಲ ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಶಾಖೆ ಹಾಗೂ ಶ್ರೀ ಜಠಾಧಾರಿ ಶಾಖೆ ಕಾಶೀಮಠ ಇದರ ವತಿಯಿಂದ ಸಾಮೂಹಿಕ ಯೋಗ ದುರ್ಗಾ ನಮಸ್ಕಾರ ಕಾರ್ಯಕ್ರಮ ವಿಟ್ಲ ಶ್ರೀ ಭಗವತೀ ದೇವಸ್ಥಾನದಲ್ಲಿ ಜರುಗಿತು.

ವಿಟ್ಲ ಅರಮನೆಯ ಕೃಷ್ಣಯ್ಯ ಕೆ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಾಬು ಕೊಪ್ಪಳ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಕಿರಣಶ್ರೀ ಹಾಗೂ ರಮ್ಯ ಅವರು ಭಜನೆ ಮಾಡಿದರು. ವಶಿಷ್ಠ ಅವರು ಅಮೃತ ವಚನ ವಾಚಿಸಿದರೆ, ಭಾರತಿ ಅವರು ಪಂಚಾಂಗ ಪಠಣ ಮಾಡಿದರು. ಶಿಕ್ಷಕ ವೇಣು ಕುಮಾರ ಅವರು ಗಣಪತಿ ನಮಸ್ಕಾರ ಮಾಡಿದರು.

ಉಷಾ, ನಂದಿನಿ, ಶಿವಪ್ರಸಾದ್ ವೀರಣ್ಣ, ಶಕುಂತಲಾ ಹಾಗೂ ಮೀರಾ ಭಟ್ ಅವರು ಪ್ರಾತ್ಯಕ್ಷತೆ ನೀಡಿದರು. ರವೀಶ್ ಅವರು ಬೌದ್ಧಿಕ ನೀಡಿದರು. ಮುಖ್ಯ ಶಿಕ್ಷಕ ಪ್ರದೀಪ್ ಉಪ್ಪಿನಂಗಡಿ ಅವರು ದುರ್ಗಾ ನಮಸ್ಕಾರ ನಡೆಸಿಕೊಟ್ಟರು.

ಜನಾರ್ದನ ಪದ್ಮಶಾಲಿ ಅವರು ವಂದಿಸಿದರೆ, ಶಿಕ್ಷಕಿ ಪ್ರಪುಲ್ಲಾ ಅವರು ಸ್ವಾಗತಿಸಿ, ನಿರೂಪಿಸಿದರು.

- Advertisement -

Related news

error: Content is protected !!