Sunday, January 24, 2021

ದಕ್ಷಿಣ ಕನ್ನಡ ಮರಾಟಿ ಸಂರಕ್ಷಣಾ ಸಮಿತಿಯಿಂದ ಸ್ವಚ್ಚತಾ ಕಾರ್ಯ ಕ್ರಮ

ವಿಟ್ಲ: ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಬಂಟ್ವಾಳ ತಾಲೂಕಿನ ಘಟಕದ ಅಡ್ಯನಡ್ಕ ಜನತಾ ಜ್ಯೂನಿಯರ್ ಕಾಲೇಜ್ ನಲ್ಲಿ ದಿನಾಂಕ 22/11/2020ರಂದು ಸ್ವಚ್ಚತಾ ಕಾರ್ಯ ಕ್ರಮ ನಡೆಯಿತು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀನಿವಾಸರವರು, ಜಿಲ್ಲಾಅಧ್ಯಕ್ಷ ರಾದ ಅಶೋಕ ನಾಯ್ಕ ಕೆದಿಲ, ಸಂಚಾಲಕರಾದ ಶ್ರೀ ಧರ್ ನಾಯ್ಕ ಮುಂಡೋವು ಮೂಲೆ, ಪುತ್ತೂರು ತಾಲೂಕಿನ ಘಟಕದ ಅಧ್ಯಕ್ಷ ರಾದ ವಿನಯ ಆರ್ಯಪು ಬಂಟ್ವಾಳ ತಾಲೂಕಿನ ಘಟಕದ ಸಂಚಾಲಕರಾದ ತಿರುಮಲೇಶ್ ನಾಯ್ಕ, ಜನತಾ ಹೈಸ್ಕೂಲ್ ಮುಖ್ಯೋಪಾಧ್ಯಾಯರಾದ ಟಿ‌.ಆರ್ ನಾಯ್ಕ, ದ.ಕ ಜಿಲ್ಲಾ ಸದಸ್ಯರು ಮತ್ತು ತಾಲೂಕಿನ ಸದಸ್ಯರು ಶಾಲಾ ಸಿಬ್ಬಂದಿ ವರ್ಗದವರು ಕಾರ್ಯ ಕ್ರಮದಲ್ಲಿ ಭಾಗವಹಿಸಿದರು.

ಶಾಲಾ ಕಾಲೇಜು ಪ್ರಾರಂಭಕ್ಕೆ ಸರ್ಕಾರದ ಮುನ್ಸೂಚನೆ ನೀಡುವಾಗ ಶಾಲೆಯ ವಠಾರ ಶುಚಿಯಾಗಿ ಇಡುವುದು ಇಂತಹ ಸಮಾಜ ಮುಖಿ ಕೆಲಸದಲ್ಲಿ ನಮ್ಮ ಕರ್ತವ್ಯ ವನ್ನು ನಾವು ಮಾಡಿದ್ದೇವೆ ಎಂದು ಜಿಲ್ಲಾ ಅಧ್ಯಕ್ಷರು ಹೇಳಿದರು. ಸ್ವಚ್ಚತಾ ಕಾರ್ಯಕ್ರಮ ವನ್ನು ಮಾಡಿದ ಜಿಲ್ಲಾ ಸಂಘದ ಕೆಲಸಕ್ಕೆ ಮೆಚ್ಚುಗೆಯನ್ನು ಪ್ರಾಂಶುಪಾಲರಾದ ಶ್ರೀ ನಿವಾಸರವರು ವ್ಯಕ್ತ ಪಡಿಸಿದರು.

ಇಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು. ಇದಕ್ಕೆ ಸಹಕರಿಸಿ ಬೆಳಗ್ಗಿನಿಂದ ಸಾಯಂಕಾಲದ ವರೆಗೆ ಕೆಲಸ ಕಾರ್ಯ ನಡೆಸಿದ ಎಲ್ಲಾ ಸದಸ್ಯರಿಗೂ ಮುಖ್ಯೋಪಾಧ್ಯಾಯರಾದ ಟಿ. ಆರ್ ನಾಯ್ಕರವರು ಧನ್ಯವಾದವನ್ನು ಹೇಳಿದರು.

- Advertisement -

MOST POPULAR

HOT NEWS

Related news

error: Content is protected !!