Saturday, May 4, 2024
spot_imgspot_img
spot_imgspot_img

ವಿಟ್ಲ: ಸರಕಾರಿ ಜಾಗ ಅತಿಕ್ರಮಿಸಿ ವಾಣಿಜ್ಯ ಕಟ್ಟಡ ನಿರ್ಮಾಣದ ಆರೋಪ; ಪ್ರಭಾವಿಗಳ ನೆರವು – ಕಣ್ಣುಮುಚ್ಚಿ ಕುಳಿತ ಪಂಚಾಯತ್ ಆಡಳಿತ ವರ್ಗ

- Advertisement -G L Acharya panikkar
- Advertisement -

ವಿಟ್ಲ: ಸರಕಾರಿ ಜಾಗವನ್ನು ಅತಿಕ್ರಮಿಸಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಸರ್ವೆ ನಂಬ್ರ 81/1C ಯ 0.33 ಸೆಂಟ್ಸ್ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುವುದಾಗಿ ಹೇಳಿ ವಾಣಿಜ್ಯ ಕಟ್ಟಡಕ್ಕೆ ಅನುಮತಿಯನ್ನು ಪಡೆದುಕೊಂಡು ಸರಕಾರಿ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಉರಿಮಜಲು ನಾರಾಯಣ ಗೌಡ ಬಿನ್ ರಾಮಣ್ಣ ಗೌಡ ಎಂಬವರು ಅತ್ರಿಕಮಿಸಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುತ್ತಿರುವ ವ್ಯಕ್ತಿ. ಇಡ್ಕಿದು ಪಂಚಾಯತ್‌ನಿಂದ ವಾಣಿಜ್ಯ ಕಟ್ಟಡಕ್ಕೆ ಅನುಮತಿಯನ್ನು ಪಡೆದು, ಪಂಚಾಯತ್‌ ನೀಡಿದ ಯಾವುದೇ ಷರತ್ತು ಪೂರೈಸದೆ ಉಲ್ಲಂಘನೆ ಮಾಡಿ ಸರಕಾರಿ ಜಾಗವನ್ನು ಅತಿಕ್ರಮಿಸಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ.

ಉರಿಮಜಲು ನಾರಾಯಣ ಗೌಡ ತನ್ನ ಜಮೀನಿನ ಎದುರಿನಲ್ಲಿರುವ ಬೆಲೆ ಬಾಳುವ ಅರಣ್ಯ ಇಲಾಖೆಯ ಮರಗಳನ್ನು ನಾಶಪಡಿಸಿದ್ದಾನೆ. ಅದೇ ಜಾಗದಲ್ಲಿ ಕಟ್ಟಡ ನಿರ್ಮಾಣವನ್ನು ಪ್ರಭಾವಿಗಳ ನೆರವಿನಿಂದ ರಾಜಾರೋಷವಾಗಿ ನಿರ್ಮಾಣ ಮಾಡುತ್ತಿದ್ದಾನೆ. ಈ ಬಗ್ಗೆ ಸಚಿನ್ ಉರಿಮಜಲು ಇಡ್ಕಿದು ಗ್ರಾಮ ಪಂಚಾಯತ್‌ಗೆ ದೂರು ಸಲ್ಲಿಸಿ ಅನಧಿಕೃತ, ಸರಕಾರಿ ಅಕ್ರಮಿತ ಜಮೀನಿನಲ್ಲಿ ಕಟ್ಟಡ ನಿರ್ಮಾಣವನ್ನು ತಡೆಯಬೇಕೆಂದು ದೂರು ಅರ್ಜಿ ನೀಡಿದ್ದು, ಈ ಮನವಿಯನ್ನು ಪುರಸ್ಕರಿಸಿದ ಇಡ್ಕಿದು ಪಂಚಾಯತ್ ಕಟ್ಟಡ ಮಾಲೀಕನಿಗೆ ನೋಟೀಸ್ ನೀಡಿ, ಸೂಕ್ತ ದಾಖಲೆಗಳನ್ನು ಪಂಚಾಯತ್‌ಗೆ ಸಲ್ಲಿಸಲು ಗಡುವು ನೀಡಿದಲ್ಲದೆ ತಾತ್ಕಾಲಿಕ ಸ್ಟೇ ಆರ್ಡರ್ ನೀಡಿರುತ್ತಾರೆ.

ಆದರೆ ಕಟ್ಟಡದ ಮಾಲಿಕ ಯಾವುದೇ ದಾಖಲೆಯನ್ನು ವಾಯಿದೆಯೊಳಗೆ ಪಂಚಾಯತ್‌ಗೆ ನೀಡದ ಕಾರಣ ಇಡ್ಕಿದು ಗ್ರಾಮ ಪಂಚಾಯತ್‌ ದಿನಾಂಕ 24-4-023 ರಂದು ಕಟ್ಟಡ ನಿರ್ಮಾಣಕ್ಕೆ ತಡೆಯಾಜ್ಞೆ ನೀಡಿರುತ್ತದೆ. ಆಗ ಕಟ್ಟಡದ ಮಾಲೀಕ ತನ್ನ ಹಣಬಲ, ರಾಜಕೀಯ ಬಲ ಹಾಗೂ ಕಂದಾಯ ಇಲಾಖೆಯಲ್ಲಿರುವ ತನ್ನ ಸಹೋದರ ರಾಘವ ಗೌಡನ ನೆರವಿನೊಂದಿಗೆ ಕಟ್ಟಡ ನಿರ್ಮಾಣವನ್ನು ರಾಜಾರೋಷವಾಗಿ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಇಡ್ಕಿದು ಪಂಚಾಯತ್, ತಾಲೂಕು ಪಂಚಾಯತ್, ವಿಎ ಕಛೇರಿ, ತಹಶೀಲ್ದಾರ್, ಜಿಲ್ಲಾಧಿಕಾರಿ, ಅಧ್ಯಕ್ಷರಿಗೆ, ಎಸ್. ಪಿ. ಕಛೇರಿಗೆ ಮನವಿ ಸಲ್ಲಿಸಿ ಈ ಅಕ್ರಮವನ್ನು ನಿಲ್ಲಿಸಲು ಸಹಾಯ ಯಾಚಿಸಿದ್ದಾರೆ. ಆದರೆ ಪ್ರಭಾವಿಗಳ ನೆರವು, ಸ್ಥಳೀಯ ಬೋಕರ್‌ನ ಸಹಾಯ ಹಾಗೂ ಕಂದಾಯ ಇಲಾಖೆಯ ನೌಕರ ತನ್ನ ಸಹೋದರ ರಾಘವ ಗೌಡನ ನೆರವಿನೊಂದಿಗೆ ಕಟ್ಟಡ ನಿರ್ಮಾಣ ಎಗ್ಗಿಲ್ಲದೆ, ರಾಜಾರೋಷವಾಗಿ ನಡೆಯುತ್ತಿದೆ. ತನ್ನ ಕೃಷಿ ಭೂಮಿಯನ್ನು ನಿಯಮ ಬಾಹಿರವಾಗಿ ಕನ್ವರ್ಷನ್ ಮಾಡಿ, ಗೃಹಬಳಕೆಯ ವಿದ್ಯುತ್ತನ್ನು ವಾಣಿಜ್ಯ ಕಟ್ಟಡ ನಿರ್ಮಾಣ ಉಪಯೋಗಿಸಿ, ಸರಕಾರಿ ಜಮೀನು ಅತಿಕ್ರಮಿಸಿ ರಾಜ್ಯ ಹೆದ್ದಾರಿಯಲ್ಲಿ ರೋಡ್ ಮಾರ್ಜಿನ್ ಕಟ್ಟಡ ನಿರ್ಮಾಣವಾಗುತ್ತಿದ್ದರೂ ಸರಕಾರದ ಯಾವುದೇ ಇಲಾಖೆ ಹಾಗೂ ಇಡ್ಕಿದು ಗ್ರಾಮ ಪಂಚಾಯತ್ ಕಟ್ಟಡ ನಿರ್ಮಾಣ ತಡೆಯಲು ವಿಫಲವಾಗಿರುವುದನ್ನು ಕಂಡು ದೂರುದಾರ ಸಚಿನ್ ಉರಿಮಜಲು ನ್ಯಾಯಾಲಯದ ಹಾಗೂ ಲೋಕಾಯುಕ್ತರ ಮೊರೆ ಹೋಗಲು ನಿರ್ಧರಿಸಿದ್ದಾಗಿ ಸಚಿನ್ ಉರಿಮಜಲು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಅತಿಕ್ರಮಿತ, ಅನಧಿಕೃತ ಕಟ್ಟಡ ನಿರ್ಮಾಣವನ್ನು ತಡೆಹಿಡಿಯಬೇಕಾಗಿದೆ.

- Advertisement -

Related news

error: Content is protected !!