



ಕೆಂಪು ಕಲ್ಲು ಪಾಯ ಮತ್ತು ಲಾರಿ ಮಾಲಕರ ಸಂಘ ದ ಕ ಜಿಲ್ಲೆ ವಿಟ್ಲ ವಲಯ ಸಂಘದ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಬೊಬ್ಬೆಕ್ಕೇರಿ ಗಜಾನನ ಸಭಾ ಭವನದಲ್ಲಿ ನಡೆಯಿತು. ವಿಟ್ಲ ವಲಯದ ಅಧ್ಯಕ್ಷ ರಮೇಶ್ ವರಪ್ಪಾದೆ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಕ ಜಿಲ್ಲೆ ಕೆಂಪು ಕಲ್ಲು ಮತ್ತು ಲಾರಿ ಮಾಲಕರ ಸಂಘದ ಜಿಲ್ಲಾ ಅಧ್ಯಕ್ಷ ಸತೀಶ್ ಆಚಾರ್ಯ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ಗೌಡ ನಾಯ್ತೊಟ್ಟು, ಕೆಂಪುಕಲ್ಲು ಪಾಯ ಮತ್ತು ಲಾರಿ ಮಾಲಕರ ಜಿಲ್ಲಾ ಕಾರ್ಯದರ್ಶಿ ರವಿ ರೈ ಮುಡಿಪು, ಕೋಶಾಧಿಕಾರಿ ರಾಮಣ್ಣ ಮುಗರೋಡಿ, ಬಂಟ್ವಾಳ ವಲಯದ ಅಧ್ಯಕ್ಷ ಮೋಹನ್ ಬಂಟ್ವಾಳ, ಮುಡಿಪು ವಲಯದ ಕಾರ್ಯದರ್ಶಿ ಕಮರುದ್ದೀನ್, ಕೈಕಂಬ ವಲಯದ ಅಧ್ಯಕ್ಷ ದಿರಾಜ್ ಅಮೀನ್, ಪುತ್ತೂರು ವಲಯದ ಅಧ್ಯಕ್ಷ ಹೇಮಚಂದ್ರ ಮುರ, ವಿಟ್ಲ ಪಂಚಾಯತ್ ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಬೈಕ್ ಅಪಘಾತದಲ್ಲಿ ಗಾಯಗೊಂಡ ಮಾಮೇಶ್ವರ ಬಡ ಕುಟುಂಬದ ಕಿಶೋರ್ ಗೌಡ, ಕ್ಯಾಟರಿಂಗ್ ಕೆಲಸ ಮಾಡುವಾಗ ಕಾಲಿಗೆ ಗಾಯವಾಗಿ ನಡೆದಾಡಲು ಅಸಾಧ್ಯ ವಾದ ಚಂದಳಿಕೆ ಜನತಾ ಕಾಲೋನಿ ನಿವಾಸಿ ಪ್ರವೀಣ್ ಶೆಟ್ಟಿ, ಲಾರಿ ಡ್ರೈವರ್ ಇಬ್ರಾಹಿಂ ಕನ್ಯಾನ ಮತ್ತು ಬಡ ಕುಟುಂಬದ ಲೋಲಾಕ್ಷಿ ಕಲ್ಲಡ್ಕ ಇವರಿಗೆ ಸಂಘದ ವತಿಯಿಂದ ಧನಸಹಾಯ ಮಾಡಲಾಯಿತು.
ನೂತನ ಪದಾಧಿಕಾರಿ ಅಧ್ಯಕ್ಷ ಸುಧೀರ್ ಕೋಟ್ಯಾನ್, ಕಾರ್ಯದರ್ಶಿ ರವಿ ಪೂಜಾರಿ, ಕೋಶಾಧಿಕಾರಿ ಜಯಪ್ರಕಾಶ್ ವರಪ್ಪಾದೆ, ಅಶ್ರಫ್ ಉಕ್ಕುಡ, ಇಸ್ಮಾಯಿಲ್ ಮತ್ತು ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ವಿಟ್ಲ ವಲಯದ ಮಾಜಿ ಅಧ್ಯಕ್ಷ ಉದಯ ಕುಮಾರ್ ದಂಬೆ ಸ್ವಾಗತಿಸಿದರು. ಎಂ ಎಸ್ ಸಂಜೀವ ಪೂಜಾರಿ ವಂದಿಸಿದರು. ಕಾರ್ಯದರ್ಶಿ ಹರೀಶ್ ಎಸ್ ಪಿ ವರದಿ ಮಂಡಿಸಿ ನಿರೂಪಿಸಿದರು.