- Advertisement -
- Advertisement -
ವಿಟ್ಲದಲ್ಲಿ ನಾಳೆ (ಆ. 25) ಹುಟ್ಟೂರಿನ ಗೌರವ ಸಂಭ್ರಮಾಚರಣೆ- ರೋಡ್ ಶೋ ಕಾರ್ಯಕ್ರಮ


ವಿಟ್ಲ: ಕರ್ನಾಟಕದ ಅತೀ ದೊಡ್ಡ ರಿಯಾಲಿಟಿ ಶೋ ಝೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಲಿಟಲ್ ಚಾಂಪ್ಸ್ ಸಂಗೀತ ಕಾರ್ಯಕ್ರಮದಲ್ಲಿ ವಿಟ್ಲದ ಪ್ರತಿಭೆ ಪುಣಚ ಗ್ರಾಮದ, ಮೂಡಂಬೈಲ್ ನಿವಾಸಿ ಜಯರಾಮ್ ರೇವತಿ ದಂಪತಿಗಳ ಪುತ್ರ ಅಶ್ಮಿತ್ ಎ ಜೆ ಪ್ರಥಮ ಸ್ಥಾನಿಯೊಂದಿಗೆ ಹೊರಹೊಮ್ಮಿ ವಿಜಯಶಾಲಿಯಾಗಿರುತ್ತಾರೆ. ಇವರ ಗೆಲುವಿನ ಹುಟ್ಟೂರಿನ ಗೌರವ-ಸಂಭ್ರಮಾಚರಣೆ ಮತ್ತು ರೋಡ್ ಶೋ ಆ. 25 ನೇ ಮಂಗಳವಾರ ಸಂಜೆ 3 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಈ ಮೆರವಣಿಗೆಯು ಸಾಲೆತ್ತೂರು ರಸ್ತೆಯ ವಿಟ್ಲ ನಿರೀಕ್ಷಣ ಮಂದಿರದಿಂದ (IB) ಹೊರಟು ಜೈನ ಬಸದಿಯ ವರೆಗೆ ಬಂದು ಅಲ್ಲಿಂದ ತಿರುಗಿ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದವರೆಗೆ ವಿಟ್ಲದ ಪ್ರಮುಖ ರಸ್ತೆಯಲ್ಲಿ ಸಾಗಿ ಬರಲಿದೆ. ಈ ಕಾರ್ಯಕ್ರಮದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮೂರಿನ ಹೆಮ್ಮೆಯ ಪ್ರತಿಭೆ ಅಶ್ಮಿತ್ ಗೆ ಶುಭ ಹಾರೈಸಬೇಕೆಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -








