Friday, May 3, 2024
spot_imgspot_img
spot_imgspot_img

ವಿಟ್ಲ: ಬೀಡಿ ಕಾರ್ಮಿಕರಿಗೆ ಇನ್ನೂ ಸಿಗದ ಬಾಕಿ ತುಟ್ಟಿಭತ್ತೆ..! ನ್ಯಾಯಕ್ಕಾಗಿ ಪ್ರತಿಭಟನೆ

- Advertisement -G L Acharya panikkar
- Advertisement -

ವಿಟ್ಲ: ಸೌತ್ ಕೆನರಾ ಹೋಮ್ ಇಂಡಸ್ಟ್ರೀಸ್, ದ.ಕ ಜಿಲ್ಲಾ ಬೀಡಿ & ಜನರಲ್ ಲೇಬರ್‌ ಯೂನಿಯನ್ (0) ಎ.ಐ.ಟಿ.ಯು.ಸಿ ವತಿಯಿಂದ ರೂ.210 ಕನಿಷ್ಟ ಕೂಲಿಗೆ ಸಂಬಂಧಿಸಿದಂತೆ ಬಾಕಿ ಮೊತ್ತ ತುಟ್ಟಿಭತ್ತೆ ರೂ.12.75ನ್ನು ಕೂಡಲೇ ಪಾವತಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಯಿತು.

ದಿನಾಂಕ 01.04.2015 ರಿಂದ ತುಟ್ಟಿಭತ್ತೆ ರೂ.12.75ನ್ನು ಪಾವತಿಸಬೇಕೆಂದು ಕರ್ನಾಟಕ ರಾಜ್ಯ ಸರಕಾರದ ಆದೇಶವಿದ್ದರೂ ತಾವು 01.04.2015 ರಿಂದ 31.03. 2018 ರವರೆಗೆ ಮೂರು ವರ್ಷಗಳ ಕಾಲ ಬೀಡಿ ಕಾರ್ಮಿಕರಿಗೆ ಹಾಗೂ ನೌಕರರಿಗೆ ಸದ್ರಿ ಆದೇಶ ಸಂಬಂಧಿತ ತುಟ್ಟಿಭತ್ಯೆ ಅಂಶವನ್ನು ಪಾವತಿಸಿರುವುದಿಲ್ಲ. ಈ ಬಗ್ಗೆ ಗಣೇಶ್ ಬೀಡಿ ಸಂಸ್ಥೆಯವರು ರಾಜ್ಯ ಉದ್ಧ ನ್ಯಾಯಾಲಯದಲ್ಲಿ ಸಲ್ಲಿಸಿದ ರಿಟ್ ಅರ್ಜಿ ಸಂಖ್ಯೆ 11800/2019 ಕ್ಕೆ ಸಂಬಂಧಿಸಿ ದಿನಾಂಕ 28.02.2023 ರಂದು ತೀರ್ಪು ಪ್ರಕಟಿಸಲಾಗಿದ್ದು ಅದರಲ್ಲಿ ಸರಕಾರದ ಅಧಿಸೂಚನೆಯನ್ನು ಪುಷ್ಟಿಕರಿಸಿ ಪಾವತಿಯಾಗದಿರುವ ರೂ.12.75 ತುಟ್ಟಿ ಬಟ್ಟೆಯನ್ನು ಪಾವತಿಸಬೇಕೆಂದು ಆದೇಶಿಸಿತ್ತು,

ಈ ಆದೇಶವು ತಾವೂ ಸೇರಿದಂತೆ ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಬೀಡಿ ಕೈಗಾರಿಕೆಗಳಿಗೆ ಅನ್ವಯಿಸುತ್ತದೆ. ಅಲ್ಲದೆ ದಿನಾಂಕ 01.04.2018 ರಿಂದ ಜ್ಯಾರಿ ಮಾಡಬೇಕಾಗಿದ್ದ ರೂ.210 ಕನಿಷ್ಟ ಕೂಲಿಯನ್ನೂ ನೀಡದಿರುವುದರಿಂದ ಪ್ರಸ್ತುತ ಬೀಡಿ ಕಾರ್ಮಿಕರು ಪ್ರತೀ ಸಾವಿರ ಬೀಡಿಗಳ ಮೇಲೆ ರೂ.39.98 ಕಡಿಮೆ ಮಜೂರಿಯಿಂದ ವಂಚಿಸಲ್ಪಟ್ಟಿದ್ದಾರೆ. ರೂ.210 ಕನಿಷ್ಟ ಕೂಲಿಗೆ ಸಂಬಂಧಿಸಿದಂತೆ ಬಾಕಿ ಮೊತ್ತವನ್ನು ಕೂಡಲೇ ಪಾವತಿಸಬೇಕೆಂದು ಒತ್ತಾಯಿಸಿ ವಿಟ್ಲದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆ ವೇಳೆ ಜಿಲ್ಲಾ ಕಾರ್ಯದರ್ಶಿಯಾದ ಬಿ.ಶೇಖರ್‌, ಸಂಘದ ಕಾರ್ಯದರ್ಶಿ ಬಿ.ಯಂ.ಹಸೈನಾರ್, ಹಾಗೂ ಸಂಘಟನಾ ಕಾರ್ಯದರ್ಶಿ ಪಿ. ಸೀತಾರಾಮ ಹಾಗೂ ಕಾ ಓ ಕೃಷ್ಣ ಕಾ ಚಂದ್ರಶೇಖರ, ಸೀತಾರಾಮ, ರವೀಂದ್ರ, ಎ. ಆನ೦ದ ಕಾ ಕೆ.ಚಂದ್ರಶೇಖರ್, ಚಂದ್ರಶೇಖರ್, ರಾಮ ಎಂ ಹಾಗೂ ಹಲವಾರು ಬೀಡಿ ಕಾರ್ಮಿಕರು ಮತ್ತು ಇತರ ಕಾರ್ಮಿಕರು ಉಪಸ್ಥಿತರಿದ್ದರು.

- Advertisement -

Related news

error: Content is protected !!