Saturday, May 18, 2024
spot_imgspot_img
spot_imgspot_img

ವಿಟ್ಲ: ಭಾರತೀಯ ಜನತಾ ಪಕ್ಷ ಹಾಗೂ ಹಿಂದು ಜಾಗರಣ ವೇದಿಕೆಯ ವತಿಯಿಂದ ಶ್ರೀರಾಮ ಭಟ್ ಮೈರ ಅವರಿಗೆ ಸನ್ಮಾನ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ಭಾರತೀಯ ಜನತಾ ಪಕ್ಷದ ಸ್ಥಾಪನಾ ದಿನದ ಅಂಗವಾಗಿ ಬಂಟ್ವಾಳ ತಾಲೂಕು ಪುತ್ತೂರು ವಿಧಾನಸಭಾ ವ್ಯಾಪ್ತಿಯ ಕೆದಿಲ ಗ್ರಾಮದ ಸಂಘದ ಹಿರಿಯ ಸ್ವಯಂಸೇವಕರು, ಭಾ.ಜ.ಪ ದ ಕಾರ್ಯಕರ್ತರು ಆದ ಶ್ರೀ.ರಾಮ ಭಟ್ ಮೈರ ಇವರನ್ನು ಗೌರವ ಪೂರ್ವಕವಾಗಿ ಅಭಿನಂದಿಸಲಾಯಿತು.

ಕೆದಿಲ ಗ್ರಾಮದಲ್ಲಿ ಸಂಘ ಹಾಗೂ ಭಾರತೀಯ ಜನತಾ ಪಕ್ಷವನ್ನು ಬೆಳೆಸುವಲ್ಲಿ ಹಗಲಿರುಳೆನ್ನದೆ ಶ್ರಮವಹಿಸಿ ದುಡಿದದ್ದಲ್ಲದೆ, ಅನೇಕ ಕಾರ್ಯಕರ್ತರನ್ನು ತನ್ನ ಗರಡಿಯಲ್ಲಿ ರೂಪಿಸಿದವರು ಶ್ರೀ ರಾಮಭಟ್ಟರು. ಶ್ರೀಯುತರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ಟರೊಂದಿಗೆ ಬಲ ಬುಜದಂತೆ ದುಡಿದವರು. ಅಯೋಧ್ಯೆಯ ಕರಸೇವೆಯಲ್ಲಿ ಕೆದಿಲದಿಂದ ಹೊರಟಿದ್ದ ಕರಸೇವಕರ ಪ್ರಮುಖರಾಗಿ ಕಾರ್ಯನಿರ್ವಹಿಸಿದವರು.


ನಂತರದ ದಿನಗಳಲ್ಲಿ ಭಾರತೀಯ ಜನತಾ ಪಕ್ಷದ ಕೆದಿಲ ಗ್ರಾಮ ಸಮಿತಿ ಅಧ್ಯಕ್ಷರಾಗಿ ಅನೇಕ ವರ್ಷ ತನು,ಮನ,ಧನ ಅರ್ಪಿಸಿ ದುಡಿದರು. ಅಲ್ಲದೆ ಅನೇಕ ಕಾರ್ಯಕರ್ತರನ್ನು ತನ್ನ ಗರಡಿಯಲ್ಲಿ ರೂಪಿಸಿದರು.
ಬ್ರಹ್ಮಚಾರಿಯಾಗಿಯೇ ಈವರೆಗೂ ಜೀವನ ನಡೆಸುತ್ತಿರುವ ರಾಮ ಭಟ್ಟರು ತನ್ನನ್ನು ಸಮಾಜಕ್ಕೆ ಅರ್ಪಿಸಿಕೊಂಡವರಂತೆ ಸಾಮಾಜಿಕ ಕಾರ್ಯದಲ್ಲಿ ತೊಡಗಿದವರು.


ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದ ಪ್ರಥಮ ಬ್ರಹ್ಮಕಲಶದಲ್ಲಿ ಚಪ್ಪರ ಸಮಿತಿಯ ರೂವಾರಿಯಾಗಿ ಅವರು ತೆಗೆದುಕೊಂಡ ಜವಾಬ್ದಾರಿ ಅವರ್ಣನೀಯ. ಹೀಗೆ ಸಂಘ,ಪಕ್ಷ,ದೇವಳ ಎಂಬಂತೆ ಹಲವು ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು.


ಪ್ರಸ್ತುತ ಅನಾರೋಗ್ಯದಿಂದಿರುವ ರಾಮ ಭಟ್ಟರನ್ನು ಅವರು ಪ್ರಾಣದಂತೆ ಪ್ರೀತಿಸಿದ ಭಾರತೀಯ ಜನತಾ ಪಕ್ಷದ ಸ್ಥಾಪನಾ ದಿನದ ಅಂಗವಾಗಿ ಭಾರತೀಯ ಜನತಾ ಪಕ್ಷ ಹಾಗೂ ಹಿಂದು ಜಾಗರಣ ವೇದಿಕೆಯ ವತಿಯಿಂದ ಶ್ರೀಯುತರನ್ನು ಅವರ ನಿಲಯವಾದ ಮಧುರಾದಲ್ಲಿ ಸನ್ಮಾನಿಸಲಾಯಿತು.

driving

ಸನ್ಮಾನ ಕಾರ್ಯಕ್ರಮದಲ್ಲಿ ಹಿಂದು ಜಾಗರಣ ವೇದಿಕೆಯ ಮಾತೃ ಸುರಕ್ಷಾ ಮಂಗಳೂರು ವಿಭಾಗ ಸಂಯೋಜಕರಾದ ಶ್ರೀ ಗಣರಾಜ ಭಟ್ ಕೆದಿಲ. ಭಾರತೀಯ ಜನತಾ ಪಕ್ಷದ ಗ್ರಾಮ ಸಮಿತಿ ಅಧ್ಯಕ್ಷರು ಆದ ಶ್ರೀ ಪದ್ಮನಾಭ ಭಟ್,ಕೆದಿಲ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಶ್ರೀ ಅಣ್ಣಪ್ಪ ಕುಲಾಲ್, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಕುಶಾಲಪ್ಪ ಕಜೆ, ಯುವಮೋರ್ಚಾದ ಉಪಾಧ್ಯಕ್ಷ ರಾದ ಶ್ರೀ ಜಯಪ್ರಕಾಶ .
ಹಿರಿಯ ಕಾರ್ಯಕರ್ತರಾದ ಜಿನ್ನಪ್ಪ ಮೂಲ್ಯ,ಮೋನಪ್ಪ ಮೂಲ್ಯ,ಗುರುವಪ್ಪ ಕುಲಾಲ್, ಹಾಗು ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!