Friday, March 31, 2023
spot_imgspot_img
spot_imgspot_img

ವಿಟ್ಲದ ಯುವಕನಲ್ಲಿ ಪಾಸಿಟಿವ್ ಪತ್ತೆ: ವೆನ್ಲಾಕ್ ಆಸ್ಪತ್ರೆಗೆ ದಾಖಲು

- Advertisement -G L Acharya G L Acharya
- Advertisement -

ವಿಟ್ಲ: ವಿಟ್ಲದ ಒಕ್ಕೆತ್ತೂರು ಯುವಕನಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಿಟ್ಲ ಸಮೀಪದ ಒಕ್ಕೆತ್ತೂರು ನಿವಾಸಿ , 31 ವರ್ಷದ ಯುವಕ

ಮೂರು ತಿಂಗಳ ಹಿಂದೆ ದುಬೈಯಿಂದ ಊರಿಗೆ ಬಂದಿದ್ದ. ಈ ಸಂದರ್ಭ ಆತನಲ್ಲಿ ಯಾವುದೇ ರೋಗದ ಲಕ್ಷಣಗಳು ಬಂದಿರಲಿಲ್ಲ. ಎರಡು ದಿನಗಳಿಂದ ಆತನಿಗೆ ಜ್ವರ, ಕೆಮ್ಮು ಉಂಟಾದ ಹಿನ್ನೆಲೆಯಲ್ಲಿ ಸೋಮವಾರ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿದ್ದು, ಅಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಮನೆಯಲ್ಲಿ ಇರುವಂತೆ ಸೂಚಿಸಲಾಗಿದೆ. ಮಂಗಳವಾರ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಬಳಿಕ ಆರೋಗ್ಯ ಇಲಾಖೆ ನೇತೃತ್ವದಲ್ಲಿ ವೆನ್ಲಾಕ್ ಆಸ್ಪತ್ರೆಗೆ ಶಿಪ್ಟ್ ಮಾಡಲಾಗಿದೆ.
ಆತನಿಗೆ ಸೋಂಕು ಯಾವ ಮೂಲದಿಂದ ಬಂದಿರುವ ಬಗ್ಗೆ ತಿಳಿದಿಲ್ಲ‌. ಹಲವರನ್ನು ಸಂಪರ್ಕ ಮಾಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

- Advertisement -

Related news

error: Content is protected !!