Monday, July 20, 2026
spot_imgspot_img
spot_imgspot_img

ವಿಟ್ಲ: ಬಿರುಕುಬಿಟ್ಟು ಅಪಾಯದ ಅಂಚಿನಲ್ಲಿರುವ ವಿದ್ಯುತ್ ಕಂಬ; ಸಾರ್ವಜನಿಕರಿಂದ ತೀವ್ರ ಆಕ್ರೋಶ!

- Advertisement -
- Advertisement -

ವಿಟ್ಲ: ವಿದ್ಯುತ್ ಕಂಬವೊಂದು ಬಿರುಕುಬಿಟ್ಟಿದ್ದು ಅಪಾಯದ ಅಂಚಿನಲ್ಲಿರುವ ಬಗ್ಗೆ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ವಿಟ್ಲ ಬಸ್ ಸ್ಟ್ಯಾಂಡ್ ಬಳಿ ಕ್ಯಾಂಪ್ಕೋಗೆ ಹೋಗುವ ರಸ್ತೆಯಲ್ಲಿ ವಿದ್ಯುತ್ ಕಂಬವೊಂದು ಬಿರುಕುಬಿಟ್ಟಿದ್ದು ಅಪಾಯದ ಅಂಚಿನಲ್ಲಿದೆ.

ಇದರ ಬಗ್ಗೆ ಇನ್ನು ಯಾವುದೇ ರೀತಿಯ ಕ್ರಮವನ್ನು ಕೈಗೊಳ್ಳದ ಮೆಸ್ಕಾಂ ಬಗ್ಗೆ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಅಂಗಡಿಯವರು ಈ ಬಗ್ಗೆ ಮೆಸ್ಕಾಂಗೆ ಮಾಹಿತಿ ನೀಡಿದರು ಮೆಸ್ಕಾಂ ಇನ್ನೂ ಎಚ್ಚೆತ್ತುಕೊಳ್ಳಲಿಲ್ಲ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಅಪಾಯ ನಡೆದ ನಂತರವೇ ಬರುವುದು ಎನ್ನುವ ರೀತಿಯಲ್ಲಿ ಮೆಸ್ಕಾಂ ಸಿಬ್ಬಂದಿಗಳು ಇನ್ನಾದರೂ ಇದರ ಬಗ್ಗೆ ಕ್ರಮ ಕೈಗೊಳ್ಳಲ್ಲಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!