



ವಿಟ್ಲ: ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ-2024 ಪುರಸ್ಕೃತರಾದ ವಿಟ್ಲ-ಪಡ್ನೂರು ಗ್ರಾಮದ ನಾದಸ್ವರ ವಾದಕ ‘ಗೋಪಾಲ ಜೋಗಿ’ ಹಾಗೂ ದೈವ ನರ್ತಕರಾದ ‘ಶೇಖರ ಪರವ ಇವರಿಗೆ ಶ್ರೀ ಮಲರಾಯಿ ಭಜನಾ ಮಂಡಳಿ ಕಾಪುಮಜಲು ಇದರ ವತಿಯಿಂದ ಗೌರವ ಸಮರ್ಪಣೆ ಮಲರಾಯಿ ಭಜನಾ ಮಂಡಳಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಅರ್ಚಕರಾದ ಉದಯ ನಾರಾಯಣ ಭಟ್ ಎತ್ತುಗಲ್ಲು, ಮಲರಾಯಿ ಭಜನಾ ಮಂಡಳಿ ಕಾಪುಮಜಲು ಇದರ ಅಧ್ಯಕ್ಷ ಅರವಿಂದ ರೈ ಮೂರ್ಜೆಬೆಟ್ಟು, ಬಾಲಗೋಕುಲ ಸಮಿತಿಯ ಸಂಚಾಲಕ ಉಮೇಶ್ ಶೆಟ್ಟಿ ಕಾಪುಕೋಡಿ, ಹಿರಿಯ ಭಜನಾ ಸದಸ್ಯ ಬಾಲಕೃಷ್ಣ ಮಡಿವಾಳ, ಶಿಲ್ಪ ಶ್ರೀ ಯುವಕ ಮಂಡಲದ ಅಧ್ಯಕ್ಷ ರೋಹಿತ್ ರೈ ಚೆಂಬರಡ್ಕ, ಫ್ರೆಂಡ್ಸ್ ಕಾಪುಮಜಲು ಅಧ್ಯಕ್ಷ ವಿನಯ್ ಜೋಗಿ, ಮಹಿಳಾ ಭಜನಾ ಮಂಡಳಿ ಅಧ್ಯಕ್ಷೆ ರಕ್ಷಿತಾ ರೈ ಗ್ರಾಮಚಾವಡಿ, ಭಜನಾ ಮಂಡಳಿಯ ಪ್ರಮುಖರಾದ ಅರುಣ್ ಮಡಿವಾಳ, ವಸಂತ ಮಡಿವಾಳ, ಪದ್ಮನಾಭ ಮಡಿವಾಳ, ಕಾಪುಮಜಲು, ಆನಂದ ಮಡಿವಾಳ ಕಾಪುಮಜಲು, ಮಹಿಳಾ ಪ್ರಮುಖರಾದ ಭವ್ಯ ಅರುಣ್, ಭಾರತಿ, ಮಾಲತಿ ಜೋಗಿ, ರೂಪ, ಕಮಲಾಕ್ಷಿ, ಕಲ್ಯಾಣಿ ಹಾಗೂ ಭಜನಾ ಮಂಡಳಿಯ ಸದಸ್ಯರುಗಳು, ಊರಿನ ಗ್ರಾಮಸ್ಥರು, ಉಪಸ್ಥಿತರಿದ್ದರು.
