- Advertisement -
- Advertisement -


ವಿಟ್ಲ: ದಯಾ ಕ್ರಿಯೇಷನ್ ಬಾಯಾರು ಇದರ 4ನೇ ವರ್ಷದ ಸಂಭ್ರಮೋತ್ಸವ ಕಾರ್ಯಕ್ರಮ ಇಡ್ಕಿದು ಸೇವಾ ಸಹಕಾರಿ ಸಂಘ ನಿ ಕುಳ ಕುಂಡಡ್ಕ ಶಾಖೆ ಕಲಶಾಮೃತ ಹಾಲ್ ನಲ್ಲಿ ವಿವಿಧ ಮನೋರಂಜನಾ ಕಾರ್ಯಕ್ರಮದೊಂದಿಗೆ ನಡೆಯಿತು.

ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀಧರ್ ಬಾಳೆಕಲ್ಲು ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಶ್ವೇತಾ ಪೂಜಾರಿ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರು, ದಯಾನಂದ ಅಮೀನ್ ಬಾಯಾರು,ಮಹೇಶ್ ಕಾಮಜಾಲು, ಶ್ರೀಮತಿ ಶೀಲಾವತಿ ವಿಟ್ಲ, ತೋಡಿಕಾನ ಅಬ್ದುಲ್ಲಾ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಸಭೆಯಲ್ಲಿ ತೋಡಿಕಾನ ಅಬ್ದುಲ ಇವರ ಸಾಹಿತ್ಯದ ಮೆರುಗನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು. ಹಾಗೂ ಕಳೆದ SSLC ಪರೀಕ್ಷೆಯಲ್ಲಿ ಅತ್ಯಧಿ ಅಂಕ ಗಳಿಸಿದ್ದು ಅಲ್ಲದೆ ಉತ್ತಮ ಕ್ರೀಡಾಪಟು ಎಂಬ ನಿಟ್ಟಿನಲ್ಲಿ ಶ್ರೀಯುತ ಕೌಶಿಕ್ ಕುಂಡಡ್ಕ ಇವರನ್ನು ಅಭಿನಂದಿಸಲಾಯಿತು. ದೇವಿ ಪ್ರಸಾದ್ ಕುಕ್ಕಾಜೆ ಸ್ವಾಗತಿಸಿ ಸತ್ಯ ಪ್ರಸಾದ್ ಕುಕ್ಕಾಜೆ ವಂದಿಸಿದರು ರವಿ ಎಸ್ಎಂ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.
- Advertisement -