ವಿಟ್ : ಪಶು-ಪಕ್ಷಿಗಳ ಪ್ರಸಿದ್ಧ ಔಷಧಿ ತಯಾರಿಕಾ ಸಂಸ್ಥೆಯಾದ ವಿರ್ಬ್ಯಾಕ್ ಅನಿಮಲ್ ಹೆಲ್ತ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯು ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ (ದ.ಕ.ಜಿ.ಪಂ.) ಸರ್ಕಾರಿ ಶಾಲೆಗೆ 85,000 ರೂಪಾಯಿ ಮೊತ್ತದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿದೆ. ಕಂಪನಿಯ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳ ಅಡಿಯಲ್ಲಿ ವಿದ್ಯಾರ್ಥಿಗಳ ಆರೋಗ್ಯ ಪೂರ್ಣ ಬದುಕಿಗಾಗಿ ಈ ಕೊಡುಗೆ ನೀಡಿದೆ.
ಪುತ್ತೂರಿನ ಪೆಟ್ ಪ್ಲ್ಯಾನೆಟ್ ವೆಟ್ ಫಾರ್ಮಾ ಮಾಲಿಕರಾದ ಪ್ರವೀಣ್ ರಾಜ್ ಇವರ ಸಹಕಾರದಲ್ಲಿ ನಡೆದ ಹಸ್ತಾಂತರ ಸಮಾರಂಭದಲ್ಲಿ ವಿಟ್ಲ ಪಡ್ನೂರು ಗ್ರಾಮ ಪಂ.ಅಧ್ಯಕ್ಷ ಜಯಂತ್, ಪಶುಸಂಗೋಪನಾ ವೈದ್ಯಾಧಿಕಾರಿ ಡಾ.ಪರಮೇಶ್ವರ್, ವಿರ್ಬ್ಯಾಕ್ ಕಂಪನಿಯ ವಲಯ ಅಧಿಕಾರಿಗಳಾದ ಪ್ರಜನ್, ಬಸವರಾಜ್, ಕೆ.ಜಿ.ಅರುಣ್, ಫ್ರೆಂಡ್ಸ್ ಕಾಪುಮಜಲು ಸಂಘಟನೆಯ ಅಧ್ಯಕ್ಷರಾದ ವಿನಯ್ ಜೋಗಿ ಕಾಪುಮಜಲು, ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಕೆ.ಎ.ಹಮೀದ್, ಉಪಾಧ್ಯಕ್ಷ ಉಮೇಶ್ ಬಿತ್ತಿಲು ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲೋಲಾಕ್ಷಿ, ಸಹಾಯಕ ಅಧ್ಯಾಪಕಿ ವಾಣಿಶ್ರೀ ಉಪಸ್ಥಿತರಿದ್ದರು.