Thursday, April 25, 2024
spot_imgspot_img
spot_imgspot_img

ಹಿಂದು ಸಂಘಟನೆಯ ಮುಖಂಡ ಅಕ್ಷಯ್ ರಜಪೂತ್ ರವರ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರ ಕ್ರಮ ಖಂಡನೀಯ- ಹಿಂದೂ ಜಾಗರಣ ವೇದಿಕೆ

- Advertisement -G L Acharya panikkar
- Advertisement -

ವಿಟ್ಲ: ಉಜಿರೆಯಲ್ಲಿ ಪಂಚಾಯತ್ ಚುನಾವಣಾ ಲೆಕ್ಕಾಚಾರದ ದಿನ ನಮ್ಮ ವಿರೋಧಿ ಪಾಕಿಸ್ತಾನಕ್ಕೆ ಜಿಂದಾಬಾದ್ ಹಾಕಿರುವ ಎಸ್.ಡಿ.ಪಿ.ಐ ನ ದೇಶ ವಿರೋಧಿ ಕೃತ್ಯದ ವಿರುದ್ಧ ಅಕ್ಷಯ್ ರಜಪೂತ್ ಎಂಬ ಹೆಸರಿರುವ ಫೇಸ್ಬುಕ್ ಪೇಜಿನಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್ ಹಾಕಿರುವ ಎಸ್.ಡಿ.ಪಿ.ಐ ನ ಕಛೇರಿಗೆ ಯಾಕೆ ಬೆಂಕಿ ಹಚ್ಚಬಾರದು? ಎಂದು ಬರೆದಿದ್ದಾರೆ ಎನ್ನುವ ಕಾರಣಕ್ಕೆ ಮೊನ್ನೆ ವಿಟ್ಲದಲ್ಲಿ ಎಸ್.ಡಿ.ಪಿ.ಐ ನ ಕಛೇರಿಗೆ ಬೆಂಕಿ ಹಚ್ಚಿರುವ ಘಟನೆಯನ್ನು ಹಿಂದೂ ಮುಖಂಡ ಅಕ್ಷಯ್ ರಜಪೂತ್ ರವರ ಮೇಲೆ ಹೊರಿಸಿ ಅವರ ವಿರುದ್ಧ ಗಂಭೀರ ಪ್ರಮಾಣದ ಸೆಕ್ಷನ್ ಗಳನ್ನು ಹಾಕಿ ಕೇಸ್ ದಾಖಲಿಸಿರುವ ಪೊಲೀಸರ ಕ್ರಮವನ್ನು ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಗಂಭೀರವಾಗಿ ಖಂಡಿಸುತ್ತದೆ ಎಂದು ವಿಟ್ಲ ತಾಲ್ಲೂಕು ಅಧ್ಯಕ್ಷರಾದ ಗಣೇಶ್ ಕೆದಿಲ ಹೇಳಿದರು.

ಅಕ್ಷಯ್ ರಜಪೂತ್ ರವರ ಮೇಲೆ ಕೇಸು ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿ ತುರ್ತು ಸಭೆ ಕರೆದ ಹಿಂ.ಜಾ.ವೇ. ಅವರ ಮೇಲೆ ಹೊರಿಸಿರುವ ಸುಳ್ಳು ಪ್ರಕರಣವನ್ನು ಕೈಬಿಡಬೇಕಾಗಿ ಆಗ್ರಹಿಸಿದೆ. ಎಸ್.ಡಿ.ಪಿ.ಐ ನವರ ನಡೆಯನ್ನು ನೋಡುವಾಗ ಮೊನ್ನೆ ವಿಟ್ಲದಲ್ಲಿ ಎಸ್.ಡಿ.ಪಿ.ಐ ನ ಕಾರ್ಯಕರ್ತರೇ ಅವರ ಕಛೇರಿಗೆ ಬೆಂಕಿ ಹಚ್ಚಿಕೊಂಡು ಅದನ್ನು ಹಿಂದೂ ಕಾರ್ಯಕರ್ತರ ತಲೆಗೆ ಕಟ್ಟಿ ಶಾಂತವಾಗಿರುವ ವಿಟ್ಲ ಭಾಗದಲ್ಲಿ ಗಲಭೆ ಮತ್ತು ಅಶಾಂತಿ ನಿರ್ಮಾಣಕ್ಕೆ ಪ್ರಯತ್ನವನ್ನು ಎಸ್.ಡಿ.ಪಿ.ಐ ನವರೇ ಮಾಡಿರುತ್ತಾರೆ ಎಂಬ ಅನುಮಾನ ಮೂಡುತ್ತಿದೆ ಎಂದರು.

ಅದೇ ರೀತಿ ಉಜಿರೆಯಲ್ಲಿ ಮೊನ್ನೆ ಎಸ್.ಡಿ.ಪಿ.ಐ ನ ಅಭ್ಯರ್ಥಿ ವಿಜೇತರಾದ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್ ಹಾಕಿ ಅದನ್ನು ಈಗ ಹಿಂದೂ ಕಾರ್ಯಕರ್ತರು ಹಾಕಿದ್ದು ಎಂದು ಸುಳ್ಳು ಪ್ರಚಾರ ಮಾಡಿದ್ದು ಇದಕ್ಕೆ ಪುಷ್ಠಿ ಎಂಬಂತಿದೆ ಇದೆಲ್ಲವೂ ತನಿಖೆ ನಡೆಸುತ್ತಿರುವ ಪೊಲೀಸರ ದಿಕ್ಕು ತಪ್ಪಿಸುವ ಕೆಲಸವಾಗುತ್ತಿದೆ.
ಫೇಸ್ಬುಕ್ ನಲ್ಲಿ ಯಾರಿಗೂ ಯಾರ ಹೆಸರಿನಲ್ಲಿ ಬೇಕಾದರೂ ಪೇಜ್ ಅಥವಾ ಅಕೌಂಟ್ ಮಾಡಬಹುದಾದ ಕಾರಣ ಅಕ್ಷಯ್ ರಜಪೂತ್ ಎಂಬ ಹೆಸರಿನಲ್ಲಿ ಫೇಸ್ಬುಕ್ ಅವರದ್ದೇ ಎಂದು ಹೇಳಲು ಸಾಧ್ಯವಿಲ್ಲ ಎಂದರು.

ಒಂದು ವೇಳೆ ಅವರದ್ದೇ ಆಗಿದ್ದರೂ ಸಹ ನಮ್ಮ ದೇಶದ ವಿರೋಧಿ ದೇಶ ಪಾಕಿಸ್ತಾನಕ್ಕೆ ಜೈಕಾರ ಹಾಕಿರುವ ಎಸ್.ಡಿ.ಪಿ.ಐ ನ ಕ್ರಮವನ್ನು ಖಂಡಿಸಿ ಹೇಳಿಕೆ ನೀಡಿರಬಹುದು. ಆದರೆ ಮೊನ್ನೆ ಎಸ್.ಡಿ.ಪಿ.ಐ ನ ಕಛೇರಿಗೆ ಬೆಂಕಿ ಹಚ್ಚಿರುವ ಘಟನೆಗೂ ಅವರಿಗೂ ಸಂಬಂಧ ಕಲ್ಪಿಸಿರುವ ಕ್ರಮ ಸರಿಯಲ್ಲ. ಯಾರದ್ದೋ ಒತ್ತಡಕ್ಕೆ ಮಣಿದು ಅಕ್ಷಯ್ ರಜಪೂತ್ ನವರ ವಿರುದ್ಧ ಪ್ರಕರಣ ದಾಖಲಿಸುವಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಈ ಕ್ರಮವನ್ನು ಹಿಂದೂ ಜಾಗರಣ ವೇದಿಕೆ ಖಂಡಿಸುತ್ತದೆ ಮತ್ತು ಅವರ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಕೈಬಿಡದಿದ್ದರೆ ಹಿಂದೂ ಜಾಗರಣ ವೇದಿಕೆ ಮುಂದಿನ ದಿನದಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಈ ಮೂಲಕ ಎಚ್ಚರ ನೀಡುತ್ತದೆ ಎಂದು ಹಿಂದು ಜಾಗರಣ ವೇದಿಕೆಯ ವಿಟ್ಲ ತಾಲ್ಲೂಕು ಅಧ್ಯಕ್ಷರಾದ ಗಣೇಶ್ ಕೆದಿಲ ಪ್ರಕಟಣೆಯಲ್ಲಿ ತಿಳಿಸಿದರು.

- Advertisement -

Related news

error: Content is protected !!