

ವಿಟ್ಲ: ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವಿಟ್ಲ, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಐ.ಎಮ್.ಸಿ ಸಮಿತಿ ಮತ್ತು ವಿಟ್ಲ ಪಟ್ಟಣ ಪಂಚಾಯತ್ ಸಹಯೋಗದೊಂದಿಗೆ “ಸ್ವಭಾವ್ ಸ್ವಚ್ಛತಾ ಸಂಸ್ಕಾರ್ ಸ್ವಚ್ಛತಾ” ಕಾರ್ಯಕ್ರಮದಡಿಯಲ್ಲಿ 5 ಕೀ.ಮೀ ನಷ್ಟು ಬೃಹತ್ ಸ್ವಚ್ಛತಾ ಜಾಥಾ ವಿಟ್ಲ ನಗರದ ಮುಖ್ಯ ರಸ್ತೆಗಳಲ್ಲಿ ನಡೆಯಿತು.

ಸಂಸ್ಥೆಯ ಐ.ಎಮ್.ಸಿ ಸದಸ್ಯ ಸಿ.ಎಪ್ ಸಿಕ್ವೇರಾರವರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ವಚ್ಛ ಪರಿಸರ ಸ್ವಚ್ಛ ನಗರ ಸಾರುವ ವಿವಿಧ ಘೋಷವಾಕ್ಯಗಳ ಫಲಕದೊಂದಿಗೆ ಸುಮಾರು 250 ವಿದ್ಯಾರ್ಥಿಗಳು ನಗರದ ಮುಖ್ಯ ರಸ್ತೆಗಳಲ್ಲಿ ಸಾಂಕೇತಿಕವಾಗಿ ಕಸವನ್ನು ಹೆಕ್ಕಿ ಸ್ವಚ್ಛಗೊಳಿಸುತ್ತಾ ಸಾಗಿದರು. ಪ್ರಾಚಾರ್ಯರಾದ ಹರೀಶ್‌ರವರ ನೇತೃತ್ವದಲ್ಲಿ ಎನ್.ಎಸ್.ಎಸ್ ಅಧಿಕಾರಿ ಶರತ್ ಕುಮಾರ್ ಎಸ್.ಎಚ್ ರವರ ಸಾರಥ್ಯದಲ್ಲಿ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಮೂಡಿ ಬಂದಿತು.
ವಿಟ್ಲ ಪಟ್ಟಣ ಪಂಚಾಯತ್ ಸಿಬ್ಬಂದಿಗಳಾದ ಚಂದ್ರಶೇಖರ್ ವರ್ಮ,ಲೋಕೇಶ್ ಮತ್ತು ನೀಲೇಶ್ ಕಸ ಸಂಗ್ರಹಣಾ ವಾಹನದ ನೆರವು ನೀಡಿದರು. ಸಂಸ್ಥೆಯ ಎಲ್ಲಾ ಕಿರಿಯ ತರಬೇತಿ ಅಧಿಕಾರಿಗಳು ಹಾಗೂ ವಿಟ್ಲ ಪಟ್ಟಣ ಪಂಚಾಯತ್ ಸಿಬ್ಬಂದಿಯವರು ಸಹಕರಿಸಿದರು.
