Tuesday, June 9, 2026
spot_imgspot_img
spot_imgspot_img

ವಿಟ್ಲ: (ಜ.14) ಡಿ’ ಗ್ರೂಪ್ (ರಿ) ವಿಟ್ಲ (ಡಿ’ ಫೋರ್ ಡು) ಇದರ 15ನೇ ವರ್ಷದ ಪಾದಾರ್ಪಣೆಯ ಸಂಭ್ರಮದ ಪ್ರಯುಕ್ತ ಬೃಹತ್ ಉಚಿತ ಆರೋಗ್ಯ ಶಿಬಿರ ಮತ್ತು ರಕ್ತದಾನ ಶಿಬಿರ

- Advertisement -
- Advertisement -

ವಿಟ್ಲ: ಡಿ’ ಗ್ರೂಪ್ (ರಿ) ವಿಟ್ಲ (ಡಿ’ ಫೋರ್‍ ಡು) ಇದರ 15ನೇ ವರ್ಷದ ಪಾದಾರ್ಪಣೆಯ ಸಂಭ್ರಮದ ಪ್ರಯುಕ್ತ ಬೃಹತ್ ಉಚಿತ ಆರೋಗ್ಯ ಶಿಬಿರ ಮತ್ತು ರಕ್ತದಾನ ಶಿಬಿರವು ಜ.14ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 2.30ರ ವರೆಗೆ ವಿಟ್ಲ ಬಝಾರ್‍ ಹತ್ತಿರ, ಬ್ರೈಟ್ ಅಡಿಟೋರಿಯಂನಲ್ಲಿ ನಡೆಯಲಿದೆ. ನಡೆಯಲಿದೆ.

ಜನಪ್ರಿಯ ಆಸ್ಪತ್ರೆ ಹಾಸನ ಹಾಗೂ ಮಂಗಳೂರು ಇವರ ನುರಿತ ವೈದ್ಯರಿಂದ ಬೃಹತ್ ಉಚಿತ ಆರೋಗ್ಯ ಶಿಬಿರ ಮತ್ತು ಬ್ಲಡ್ ಡೋನರ್ಸ್‌ ಮಂಗಳೂರು ಹಾಗೂ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವು ನಡೆಯಲಿದ್ದು ನುರಿತ ವೈದ್ಯರು ಭಾಗವಹಿಸಲಿದ್ದಾರೆ.

ಶಿಬಿರದಲ್ಲಿ ಉಚಿತ ರಕ್ತಪರೀಕ್ಷೆ, ECG, ಹೃದಯ ತಜ್ಞರಿಂದ ತಪಾಸಣೆ ಮತ್ತು ಚಿಕಿತ್ಸೆ, ಕ್ಯಾನ್ಸರ್‍ ಕಾಯಿಲೆಯ ತಪಾಸಣೆ ಮತ್ತು ಚಿಕಿತ್ಸೆ, ಕಿಡ್ನಿ ಮತ್ತು ಮೂತ್ರಕೋಶ ತಜ್ಞರಿಂದ ತಪಾಸಣೆ ಮತ್ತು ಚಿಕಿತ್ಸೆ, ಕಣ್ಣಿನ ತಜ್ಞರಿಂದ ತಪಾಸಣೆ ಮತ್ತು ಕಂಪ್ಯೂಟರ್‍ ರೈಸ್ಡ್ ಕಣ್ಣಿನ ಪರೀಕ್ಷೆ, ದಂತ ವೈದ್ಯರಿಂದ ತಪಾಸಣೆ ಮತ್ತು ಚಿಕಿತ್ಸೆ, ಸ್ತ್ರಿ ರೋಗ ಮತ್ತು ಗರ್ಭಿಣಿ ತಜ್ಞರಿಂದ ತಪಾಸಣೆ ಮತ್ತು ಚಿಕಿತ್ಸೆ ಲಭ್ಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!