- Advertisement -
- Advertisement -


ವಿಟ್ಲ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವದ ಪ್ರಯುಕ್ತ ಡಿ. 31 ರಂದು ಶ್ರೀ ದೇವರಿಗೆ ವೇದಮೂರ್ತಿ ಕುಂಟುಕುಡೇಲು ರಘುರಾಮ ತಂತ್ರಿಯವರ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಿತು.



ಬೆಳಗ್ಗೆ ಗಣಪತಿ ಹೋಮ ನಡೆದು ಕಲಶಾಭಿಷೇಕ, ತುಲಾಭಾರ ಸೇವೆ, ಮಹಾಪೂಜೆ ನಡೆದು ಬಳಿಕ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ರಂಗಪೂಜೆ, ದುರ್ಗಾಪೂಜೆ, ಉತ್ಸವ ಬಲಿ ನಡೆದು ಅನ್ನಸಂತರ್ಪಣೆ ನಡೆಯಿತು.



ಜ. 1 ರಂದು ಬೆಳಗ್ಗೆ ಶ್ರೀ ಭೂತಬಲಿ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಬೆಳಿಗ್ಗೆ ಪೂಜೆ ಮಧ್ಯಾಹ್ನ ಅಯ್ಯಪ್ಪ ಸ್ವಾಮಿಗಳ ಪಡಿಪೂಜೆ, ಮಹಾಪೂಜೆ ಪ್ರಸಾದ ವಿತರಣೆ, ಬಳಿಕ ಅನ್ನಸಂತರ್ಪಣೆ ನಡೆಯಿತು.


- Advertisement -