Friday, March 29, 2024
spot_imgspot_img
spot_imgspot_img

ವಿಟ್ಲ: ವಿಠ್ಠಲ್ ಜೇಸಿಸ್ ಶಾಲೆಯಲ್ಲಿ 75ನೇ ಸ್ವಾತಂತ್ರ್ಯ ಸಂಭ್ರಮ

- Advertisement -G L Acharya panikkar
- Advertisement -

ವಿಟ್ಲ: ವಿಶ್ವ ಕಂಡ ಸಾರ್ವಭೌಮತ್ವದ ರಾಷ್ಟ್ರ ಭಾರತವನ್ನು ಬ್ರಿಟಿಷ್ ಆಳ್ವಿಕೆ ಮುಕ್ತವಾಗಿಸಿದ, ಚಳುವಳಿಗಳ ಮುಖೇನ ಉಳಿವಿಗಾಗಿ ಹೋರಾಡಿದ ಮಹಾನ್ ನಾಯಕರ ನೆನಪಿಸುವ ಭಾರತದ ಸ್ವಾತಂತ್ರೋತ್ಸವದ ಅಮೃತ ಸಂಭ್ರಮ ವರ್ಷವನ್ನು ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಾಂಕೇತಿಕವಾಗಿ ಸರಕಾರಿ ಆದೇಶದಂತೆ ಕೋವಿಡ್ ಶಿಷ್ಟಾಚಾರಗಳನ್ನು ಪಾಲಿಸುತ್ತ ಆಚರಿಸಲಾಯಿತು.

ಆಡಳಿತ ಮಂಡಳಿ, ನಿಯಮಿತ ಶಿಕ್ಷಕರು ಮತ್ತು ಆಡಳಿತ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಆಚರಿಸಲ್ಪಟ್ಟ ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲ ಶ್ರೀ ಜಯರಾಮ ರೈಯವರು ಧ್ವಜಾರೋಹಣಗೈದು, ಈ ದಿನ ದೇಶಕ್ಕಾಗಿ ಹೋರಾಡಿದ ನಾಯಕರ ನೆನಪು ಮಾತ್ರವೇ ಮುಖ್ಯವಲ್ಲ, ಆ ಬಳಿಕದ ದೇಶದ ನೈಜ ಬೆಳವಣಿಗೆ ಮತ್ತು ಹೋರಾಟದ ಪ್ರೇರಕವಾದ ಎಲ್ಲಾ ನಡೆಗಳ ಮತ್ತು ಪ್ರತಿ ವ್ಯಕ್ತಿ – ಶಕ್ತಿಗಳ ನೆನವರಿಕೆಯಾಗಬೇಕು ಎಂದರು.

ಈ ವೇಳೆ ವಿದ್ಯಾರ್ಥಿಗಳಿಗಾಗಿ ಸ್ವಾತಂತ್ರೋತ್ಸವದ ಬಗ್ಗೆ ಆನ್ಲೈನ್ ಮೂಲಕ ಹಮ್ಮಿಕೊಂಡ ಸ್ಪರ್ಧೆಗಳ ಫಲಿತಾಂಶ ಪ್ರಕಟಿಸಲಾಯಿತು. ವಿದ್ಯಾರ್ಥಿಗಳಿಗೆ ಮನೆಯಲ್ಲೇ ಸ್ವಾತಂತ್ರ್ಯ ಆಚರಣೆಯನ್ನು ಮಾಡಬೇಕಾದ ಪ್ರಸ್ತುತ ಸ್ಥಿತಿಯನ್ನು ನೆನಪಿಸುತ್ತ, ಶಾಲಾ ಸ್ಕೌಟ್,ಗೈಡ್ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ಮನೆಯಲ್ಲಿದ್ದುಕೊಂಡು ಸಂಭ್ರಮಾಚರಣೆ ಮಾಡುವ ಅವಕಾಶ ಕಲ್ಪಿಸಲಾಯಿತು.

ಒಟ್ಟಿನಲ್ಲಿ 2021 ನೇ ಸಾಲಿನ,75ರ ಸ್ವಾತಂತ್ರ ಸಂಭ್ರಮ ಸಾಂಕೇತಿಕವಾಗಿ ಮತ್ತು ವಿದ್ಯಾರ್ಥಿಗಳು ಮನೆಯಲ್ಲೇ ಸಂಭ್ರಮಿಸುವಂತೆ ಆಯಿತು.

driving
- Advertisement -

Related news

error: Content is protected !!