Wednesday, April 24, 2024
spot_imgspot_img
spot_imgspot_img

ವಿಟ್ಲ: ವಿಠಲ್ ಜೇಸೀಸ್ ಶಾಲೆಯ ವಿದ್ಯಾರ್ಥಿ ಶುಲ್ಕದಲ್ಲಿ ಮಹತ್ತರ ಕಡಿತ!

- Advertisement -G L Acharya panikkar
- Advertisement -

ವಿಟ್ಲ: ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ 2021-22 ನೇ ಸಾಲಿನ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಬಗ್ಗೆ ವಿಠಲ್ ಜೇಸೀಸ್ ಎಜ್ಯುಕೇಶನ್ ಸೊಸೈಟಿಯ ಸಭೆಯನ್ನು ಆಯೋಜಿಸಲಾಯಿತು.

ಸಭೆಯಲ್ಲಿ ಕೆ ಜಿ ಯಿಂದ 10 ನೇ ತರಗತಿ ವರಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಕೋವಿಡ್-19ರ ಸಂಕಷ್ಟಕ್ಕೆ ಪರಿಹಾರವೆಂಬಂತೆ ವಿದ್ಯಾರ್ಥಿ ಶುಲ್ಕದಲ್ಲಿ ಪರಿಷ್ಕರಣೆಯನ್ನು ಮಾಡಿ ಶುಲ್ಕದಲ್ಲಿ ಮಹತ್ತರ ಕಡಿತವನ್ನು ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಆನ್‌ಲೈನ್ ತರಗತಿಗಳನ್ನು ನಡೆಸುವ ಪ್ರಯಕ್ತ ನಿರ್ಧಾರವನ್ನು ಕೈಗೊಳ್ಳಲಾಯಿತು. ವಿದ್ಯಾರ್ಥಿಗಳಿಗೆ ಸಂಸ್ಕೃತ ಭಾಷಾ ಪ್ರವೀಣತೆಗಾಗಿ 8 ರಿಂದ 10ನೇ ತರಗತಿವರೆಗೆ ಸಂಸ್ಕೃತವನ್ನು ತೃತೀಯ ಭಾಷೆಯಾಗಿ ಬೋದಿಸುವ ಮತ್ತು ಮುಂಬರುವ ಶೈಕ್ಷಣಿಕ ವರ್ಷದಲ್ಲಿ 1ನೇ ತರಗತಿಯಿಂದ ಹಿಂದಿ ಭಾಷೆಯನ್ನು ಅಳವಡಿಸುವ ಯೊಜನೆಯನ್ನು ಹಾಕಿಕೊಳ್ಳಲಾಗಿದೆ. ಕೋವಿಡ್-19ರ ಸಂಕಷ್ಟದಿಂದಾಗಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ online ತರಗತಿಗಾಗಿ Easy pro ಎಂಬ ಹೊಸ Student App ಅಳವಡಿಸಲಾಗಿದೆ.

ಹೊಸ Student App ಉದ್ಘಾಟನೆಗೈದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಐ ಓ ಕೂಡೂರುರವರು ಮಾತನಾಡುತ್ತಾ, ಈ ಸಂಕಷ್ಟದ ಸಂದರ್ಭದಲ್ಲಿ Student App ಎಂಬ ಹೊಸ ಹೊಸ ಬದಲಾವಣೆಯೊಂದಿಗೆ ನಾವು ವಿದ್ಯಾರ್ಥಿಗಳನ್ನು ತಲುಪಬೇಕಾಗಿದೆ. ಆ ನಿಟ್ಟಿನಲ್ಲಿ ಶಾಲಾ ಆಡಳಿತ ಮಂಡಳಿಯಿಂದ ತಮ್ಮದೇ ಆದ ಹೊಸ Student App ಪರಿಚಯಿಸುವುದರ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಇದರ ಪ್ರಯೋಜನವನ್ನು ಪಡೆದುಕೊಂಡ 10ನೇ ತರಗತಿ ವಿದ್ಯಾರ್ಥಿನಿಯಾದ ಕು. ಶಾನ್ವಿ ತಮ್ಮ ಅನುಭವವನ್ನು ಹಂಚಿಕೊಂಡಳು.

ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀಧರ ಶೆಟ್ಟಿ, ಕಾರ್ಯದರ್ಶಿ ಮೋಹನ ಎ, ಜತೆ ಕಾರ್ಯದರ್ಶಿ ಶ್ರೀಪ್ರಕಾಶ್ ಕುಕ್ಕಿಲ, ಖಜಾಂಜಿ ಪ್ರಭಾಕರ ಶೆಟ್ಟಿ, ಹಿರಿಯ ನಿರ್ದೇಶಕರಾದ ಮೋನಪ್ಪ ಶೆಟ್ಟಿ, ವಿಜಯ ಪಾಯಿಸ್, ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲ ಜಯರಾಮ ರೈ ಯವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಆಡಳಿತಾಧಿಕಾರಿ ರಾಧಾಕೃಷ್ಣ ಎ. ವಂದಿಸಿದರು.

- Advertisement -

Related news

error: Content is protected !!