Tuesday, September 28, 2021
spot_imgspot_img
spot_imgspot_img

ಜೆಸಿಐ ವಿಟ್ಲ ಘಟಕದ ಆತಿಥ್ಯದಲ್ಲಿ ”ಜೆಸಿಐ ನ ರಾಷ್ಟ್ರೀಯ ಅಧ್ಯಕ್ಷರ ಅಧಿಕೃತ ಭೇಟಿ-ಬಹು ಘಟಕಗಳ ಸಮ್ಮಿಲನ ಹಾಗೂ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗ ಪ್ರಶಸ್ತಿ ಪ್ರಧಾನ” ಕಾರ್ಯಕ್ರಮದ ಯಶಸ್ವಿ ಆಯೋಜನೆ…!!

- Advertisement -
- Advertisement -

ಯುವ ಜನತೆಯಲ್ಲಿ ಧನಾತ್ಮಕ ಬದಲಾವಣೆ ಸೃಷ್ಟಿಸಿ ವ್ಯಕ್ತಿತ್ವ ವಿಕಸನ ಮಾಡುವ ಅಂತರಾಷ್ಟ್ರೀಯ ಸಂಸ್ಥೆ ಜೆಸಿಐ ಇದರ ರಾಷ್ಟ್ರೀಯ ಅಧ್ಯಕ್ಷರ ಭೇಟಿ, ವಲಯ 15ರ ವಿವಿಧ ಘಟಕಗಳ ಸಮ್ಮಿಲನ ಹಾಗೂ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಇತ್ತೀಚೆಗೆ ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜು, ಸುವರ್ಣ ರಂಗ ಮಂದಿರದಲ್ಲಿ ಯಶಸ್ವಿಯಾಗಿ ನೆರವೇರಿತು.

ಜೆಸಿಐ ವಿಟ್ಲ ಆಥಿತ್ಯದಲ್ಲಿ ಕೋವಿಡ್ ನಿಯಮಾವಳಿಗಳ ಪ್ರಕಾರ ಶಿಸ್ತುಭದ್ಧವಾಗಿಕಾರ್ಯಕ್ರಮವನ್ನು ಜೆಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷರಾದ ಜೆಸಿಐ.ಸೆನೆಟರ್. ರಾಖಿ ಜೈನ್ ಉಧ್ಘಾಟಿಸಿ ಪ್ರಶಸ್ತಿಗಳನ್ನು ವಿತರಿಸಿದರು. ವಲಯ 15ರ ವಲಯಾಧ್ಯಕ್ಷರಾದ ಜೆಸಿಐ.ಸೆನೆಟರ್. ಸೌಜನ್ಯ ಹೆಗ್ಡೆ, ಜೆಸಿಐ ಭಾರತದ G&D ವಿಭಾಗದ ರಾಷ್ಟ್ರೀಯ ನಿರ್ದೇಶಕರಾದ ಜೆಸಿಐ. ಪಿಪಿಪಿ. ಕಾರ್ತಿಕೇಯ ಮಧ್ಯಸ್ಥ, ಜೆಸಿಐ ಭಾರತದ, ಜೆಸಿಐ ಫೌಂಡೆಶನ್ ವಿಭಾಗದ ನಿರ್ದೇಶಕರಾದ ಜೆಸಿಐ.ಪಿಪಿಪಿ. ಅಲನ್ ರೋಹನ್ ವಾಜ್ ಹಾಗೂ ವಲಯ 15ರ G&D ವಿಭಾಗದ ನಿರ್ದೇಶಕರಾದ ಜೆಸಿಐ.ಸೆನೆಟರ್. ಪಶುಪತಿ ಶರ್ಮ, ವಲಯ 15ರ ಆಡಳಿತ ವಿಭಾಗದ ನಿರ್ದೇಶಕರಾದ ಜೆಸಿಐ ಸೆನೆಟರ್ ಲೋಕೇಶ್ ರೈ , ವಲಯ 15ರ ಉಪಾಧ್ಯಕ್ಷರುಗಳು, ಜೆಸಿಐ ವಿಟ್ಲ ಘಟಕದ ಅಧ್ಯಕ್ಷರಾದ ಜೆಸಿ. ಚಂದ್ರಹಾಸ ಶೆಟ್ಟಿ, ಕಾರ್ಯದರ್ಶಿ ಜೆಸಿ. ಪರಮೇಶ್ವರ ಹೆಗಡೆ, ಕಾರ್ಯಕ್ರಮದ ನಿರ್ದೇಶಕರಾದ ಜೆಸಿ.ದೀಕ್ಷಿತ್. ಜಿ. ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

ವಲಯದ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ಅತ್ಯುತ್ತಮ ಸಾಧನೆ ತೋರಿದ ‘ಟಾಪ್-1’ಘಟಕವಾಗಿ ಜೆಸಿಐ ಕಲ್ಯಾಣಪುರ,ದ್ವಿತೀಯ ಸ್ಥಾನಿಯಾಗಿ ‘ಟಾಪ್-2’ಪ್ರಶಸ್ತಿಯನ್ನು ಜೆಸಿಐ ವಿಟ್ಲ ಘಟಕ ಹಾಗೂ ತೃತೀಯ ಸ್ಥಾನದ ‘ಟಾಪ್-3’ ಪ್ರಶಸ್ತಿಯನ್ನು ಜೆಸಿಐ ಉಪ್ಪುಂದ ಘಟಕವು ಪಡೆದು ಕೊಂಡಿತು. ಇದೇ ಸಂಧರ್ಭದಲ್ಲಿ ಜೆಸಿಐ ವಿಟ್ಲ ಘಟಕವು ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ‘ಚಾಂಪಿಯನ್ ಆಫ್ ಚಾಂಪಿಯನ್’ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿತು.

ವಿಟ್ಲ ಘಟಕದ ಆತಿಥ್ಯದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ನಡೆದ ಈ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಂದ ಭಾರಿ ಪ್ರಶಂಸೆಗಳು ವ್ಯಕ್ತವಾಯಿತು ಹಾಗೂ ಜೆಸಿಐ ವಿಟ್ಲ ಘಟಕದ 2021 ರ ಈ ಸಾಧನೆಯನ್ನು ಘಟಕದ ಎಲ್ಲ ಪೂರ್ವಾಧ್ಯಕ್ಷರುಗಳು, ವಿಟ್ಲ ಪರಿಸರದ ನಾಗರಿಕರು ಶ್ಲಾಘಿಸಿ ಅಭಿನಂದಿಸಿದರು.

driving
- Advertisement -
- Advertisement -

MOST POPULAR

HOT NEWS

Related news

error: Content is protected !!