Friday, April 26, 2024
spot_imgspot_img
spot_imgspot_img

ಜೆಸಿಐ ವಿಟ್ಲ ಘಟಕಕ್ಕೆ TOP-2 ಹಾಗೂ ಚಾಂಪಿಯನ್ ಆಪ್ ಚಾಂಪಿಯನ್ ಪ್ರಶಸ್ತಿ

- Advertisement -G L Acharya panikkar
- Advertisement -

ಅಂತರಾಷ್ಟ್ರೀಯ ಸಂಸ್ಥೆ ಜೆಸಿಐ ವಿಟ್ಲ ಘಟಕವು ವಲಯ 15ರ ಅಭಿವೃದ್ಧಿ ಮತ್ತು ಬೆಳವಣಿಗೆಯ ವಿಭಾಗದ ಪ್ರತಿಷ್ಠಿತ ಪ್ರಶಸ್ತಿ TOP-2 ಹಾಗೂ ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತು.

ಜೆಸಿ.ಚಂದ್ರಹಾಸ ಶೆಟ್ಟಿ ನೇತ್ರತ್ವದ ಸುಮಾರು 41 ವರ್ಷಗಳ ಇತಿಹಾಸವುಳ್ಳ ಜೆಸಿಐ ವಿಟ್ಲ ಘಟಕವು ಅಭಿವೃದ್ದಿ ಮತ್ತು ಬೆಳವಣಿಗೆಯಲ್ಲಿ 2021 ನೇ ಸಾಲಿನಲ್ಲಿ ತೋರಿದ ಅಭೂತಪೂರ್ವ ಸಾಧನೆಗೆ ಈ ಮನ್ನಣೆ ದೊರಕಿತು.ಜೆಸಿಐ ವಿಟ್ಲ ಆಥಿತ್ಯದಲ್ಲಿ ಕೋವಿದ್ ನಿಯಮಾವಳಿಗಳ ಪ್ರಕಾರ ಶಿಸ್ತುಭದ್ಧವಾಗಿ ನಡೆದ ”NP VISIT-MULTI LOM MEET -G&D AWARD BANQUET”ಕಾರ್ಯಕ್ರಮದಲ್ಲಿ ಜೆಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷರಾದ ಜೆಸಿಐ.ಸೆನೆಟರ್.ರಾಖಿ ಜೈನ್ ಪ್ರಶಸ್ತಿಗಳನ್ನು ವಿತರಿಸಿದರು.

ವಲಯ 15ರ ವಲಯಾಧ್ಯಕ್ಷರಾದ ಜೆಸಿಐ.ಸೆನೆಟರ್.ಸೌಜನ್ಯ ಹೆಗ್ಡೆ, ಜೆಸಿಐ ಭಾರತದ G&D ವಿಭಾಗದ ರಾಷ್ಟ್ರೀಯ ನಿರ್ದೇಶಕರಾದ ಜೆಸಿಐ.ಪಿಪಿಪಿ.ಕಾರ್ತಿಕೇಯ ಮಧ್ಯಸ್ಥ, ಜೆಸಿಐ ಭಾರತದ, ಜೆಸಿಐ ಫೌಂಡೆಶನ್ ವಿಭಾಗದ ನಿರ್ದೇಶಕರಾದ ಜೆಸಿಐ.ಪಿಪಿಪಿ.ಅಲನ್ ರೋಹನ್ ವಾಜ್ ಹಾಗೂ ವಲಯ 15ರ G&D ವಿಭಾಗದ ನಿರ್ದೇಶಕರಾದ ಜೆಸಿಐ.ಸೆನೆಟರ್, ಪಶುಪತಿ ಶರ್ಮ, ವಲಯ15ರ ಆಡಳಿತ ವಿಭಾಗದ ನಿರ್ದೇಶಕರಾದ ಜೆಸಿಐ ಸೆನೆಟರ್ ಲೋಕೇಶ್ ರೈ ,ವಲಯ 15ರ ಉಪಾಧ್ಯಕ್ಷರುಗಳು ,ಜೆಸಿಐ ವಿಟ್ಲ ಘಟಕದ ಅಧ್ಯಕ್ಷರಾದ ಜೆಸಿ.ಚಂದ್ರಹಾಸ ಶೆಟ್ಟಿ,ಕಾರ್ಯದರ್ಶಿ ಜೆಸಿ ಪರಮೇಶ್ವರ ಹೆಗಡೆ ಮತ್ತು ಕಾರ್ಯಕ್ರಮದ ನಿರ್ದೇಶಕರಾದ ಜೆಸಿ.ದೀಕ್ಷಿತ್ ಜಿ.ರವರುಗಳು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

ವಿಟ್ಲ ಘಟಕದ ಈ ಸಾಧನೆಯನ್ನು ಘಟಕದ ಎಲ್ಲ ಪೂರ್ವಾಧ್ಯಕ್ಷರುಗಳು, ವಿಟ್ಲ ಪರಿಸರದ ನಾಗರಿಕರು ಶ್ಲಾಘಿಸಿ ಅಭಿನಂದಿಸಿದರು.

driving
- Advertisement -

Related news

error: Content is protected !!