Monday, July 27, 2026
spot_imgspot_img
spot_imgspot_img

ವಿಶ್ವ ಹಿಂದೂ ಪರಿಷತ್ ಭಜಂಗದಳ ವಿಟ್ಲ ಪ್ರಖಂಡ ಇದರ ಕಾಪುಮಜಲು ಘಟಕದ ನೇತೃತ್ವದಲ್ಲಿ 3 ನೇ ವರ್ಷದ ಗೋಪೂಜೆ ಕಾರ್ಯಕ್ರಮ

- Advertisement -
- Advertisement -

ವಿಟ್ಲ(ನ.15): ವಿಶ್ವ ಹಿಂದೂ ಪರಿಷತ್ ಭಜಂಗದಳ ವಿಟ್ಲ ಪ್ರಖಂಡ ಇದರ ಕಾಪುಮಜಲು ಘಟಕದ ನೇತೃತ್ವದಲ್ಲಿ “3 ನೇ ವರ್ಷದ ಗೋಪೂಜೆ” ಕಾರ್ಯಕ್ರಮವನ್ನು ಇಂದು ಕಾಪುಮಜಲು ಮಲಾರಾಯಿ ದೈವಸ್ಥಾನದ ವಠಾರದಲ್ಲಿ ನಡೆಸಲಾಯಿತು.

ಗೋಪೂಜೆ ಮಹತ್ವ ಹಾಗೂ ಗೋವಿನ ರಕ್ಷಣೆಯ ಬಗ್ಗೆ ವಿಟ್ಲ ಪ್ರಖಂಡದ ಕಾರ್ಯದರ್ಶಿ ಚರಣ್ ಕಾಪುಮಜಲು ರವರು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ವಿಟ್ಲ ಪ್ರಖಂಡದ ಸಹಸುರಕ್ಷಾ ಪ್ರಮುಖ್ ದೇವದಾಸ್ ಕಾಪುಮಜಲು, ಘಟಕದ ಗೋರಕ್ಷಣ ಪ್ರಮುಖ್ ಪ್ರಶಾಂತ್ ಗಾಣಿಗ, ಪಂಚಾಯತ್ ಮಾಜಿ ಸದಸ್ಯರಾದ ನಾಗೇಶ್ ಶೆಟ್ಟಿ ಕೊಡಂಗಾಯಿ, ಬಂಟ್ವಾಳ ಬಿ.ಜೆ.ಪಿ ರೈತ ಮೋರ್ಚಾದ ಉಪಾಧ್ಯಕ್ಷರಾದ ಅರವಿಂದ್ ರೈ, ಮಲರಾಯಿ ಭಜನಾ ಮಂಡಳಿ ಯ ಪ್ರಮುಖರಾದ ಗೋಪಾಲ ಜೋಗಿ ಕಾಪುಮಜಲು,ಅರುಣ್ ಕಾಪುಮಜಲು, ವಸಂತ್ ಮಡಿವಾಳ,ದುರ್ಗಾ ವಾಹಿನಿ ಮಾತೃ ಮಂಡಳಿಯ ಪ್ರಮುಖರಾದ ರೇವತಿ ಜೋಗಿ, ಭಾರತಿ,ಸುಜಾತ ಜೋಗಿ, ಶಾಂತಲ, ಲಕ್ಷ್ಮೀ ಕಾಪುಮಜಲು, ಮಾತೆಯರು ಹಾಗೂ ಘಟಕದ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.

ಬಳಿಕ “ಗೋವಿಗಾಗಿ ಮೇವು” ಅಭಿಯಾನದಡಿ ಕಲ್ಲಡ್ಕ ಗೋಶಾಲೆ ಗೆ ಹಸಿರು ಹುಲ್ಲನ್ನು ನೀಡಲಾಯಿತು.

.

- Advertisement -

Related news

error: Content is protected !!