Thursday, June 18, 2026
spot_imgspot_img
spot_imgspot_img

ವಿಟ್ಲ: ಅಪಘಾತದ ವಿಚಾರದಲ್ಲಿ ಇತ್ತಂಡಗಳ ನಡುವೆ ಘರ್ಷಣೆ- ಪೋಲೀಸರಿಂದ ಲಘು ಲಾಠಿ ಪ್ರಹಾರ

- Advertisement -
- Advertisement -

ವಿಟ್ಲ: ಎರಡು ಕಾರುಗಳ ನಡುವೆ ನಡೆದ ಅಪಘಾತದ ವಿಚಾರವಾಗಿ ಎರಡು ತಂಡಗಳ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತೆರಳಿದಾಗ ಪೊಲೀಸರು ಲಾಠಿ ಪ್ರಹಾರ ಮಾಡಿದ ಘಟನೆ ಮಾಣಿಯಲ್ಲಿ ನಡೆದಿದೆ. ಕಲ್ಲಡ್ಕ ಕಡೆಯಿಂದ ಮಾಣಿ ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರು ಮತ್ತು ಕಲ್ಲಡ್ಕ ಕಡೆಗೆ ಬರುತ್ತಿದ್ದ ಶಿಪ್ಟ್ ಕಾರಿನ ನಡುವೆ ಅಪಘಾತ ಸಂಭವಿಸಿತ್ತು. ಅಪಘಾತದ ಬಗ್ಗೆ ಎರಡು ಕಾರಿಗೆ ಸಂ ಬಂಧಪಟ್ಟವರ ನಡುವೆ ವಾದ ವಿವಾದ ನಡೆದು ಮಾತಿನ ಚಕಮಕಿ ನಡೆದಿದೆ.

ಬಳಿಕ ಇತ್ತಂಡದವರು ಪರಸ್ಪರ ಹಲ್ಲೆಗೆ ಮುಂದಾಗಿದ್ದರು, ಇದೇ ವೇಳೆ ಸ್ಥಳದಲ್ಲಿ ನೂರಾರು ಜನ ಜಮಾಯಿಸಿ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಘಟನೆ ಬಗ್ಗೆ ಮಾಹಿತಿ ಪಡೆದ ವಿಟ್ಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

- Advertisement -

Related news

error: Content is protected !!