Sunday, May 12, 2024
spot_imgspot_img
spot_imgspot_img

ವಿಟ್ಲ: ಶೌಚಾಲಯದ ತ್ಯಾಜ್ಯವನ್ನು ಕೇರಳದಿಂದ ತಂದು ವಿಟ್ಲ ಪರಿಸರದಲ್ಲಿ ಸುರಿಯುತ್ತಿರುವ ದುಷ್ಕರ್ಮಿಗಳು; ವಾಹನ ಸಮೇತ ಚಾಲಕನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

- Advertisement -G L Acharya panikkar
- Advertisement -

ವಿಟ್ಲ: ಶೌಚಾಲಯದ ತ್ಯಾಜ್ಯವನ್ನು ಕೇರಳದಿಂದ ತಂದು ವಿಟ್ಲ ಪರಿಸರದಲ್ಲಿ ಸುರಿಯುವ ಲಾರಿಯನ್ನು ಬೆನ್ನಟ್ಟಿದ ಸಾರ್ವಜನಿಕರು ಚಾಲಕನ ಸಹಿತ ಉಕ್ಕುಡ ಬಳಿ ತಡೆಹಿಡಿದು ವಿಟ್ಲ ಪೊಲೀಸರು ವಶಕ್ಕೆ ಒಪ್ಪಿಸಿದ್ದಾರೆ.

ಹದಿನೈದು ದಿನಗಳ ಹಿಂದಷ್ಟೇ ಇದೇ ರೀತಿ ಶೌಚಾಲಯದ ತ್ಯಾಜ್ಯ ಹೊತ್ತ ಟ್ಯಾಂಕರ್ ಕೇಪು ಗ್ರಾಮದ ಚೆಲ್ಲಡ್ಕ ಪರಿಸರದಲ್ಲಿ ಸುರಿದು ರಾದ್ಧಾಂತಕ್ಕೆ ಕಾರಣವಾಗಿತ್ತು. ಆ ಸಂದರ್ಭ ಸಾರ್ವಜನಿಕರು ಹಿಡಿದು ವಾಹನವನ್ನು ಪೊಲೀಸರ ವಶಕ್ಕೆ ನೀಡಿದ್ದರು. ಇದೀಗ ಮತ್ತೆ ದುಷ್ಕೃತ್ಯ ಎಸಗಲು ಬಂದ ಟ್ಯಾಂಕರ್ ಚಾಲಕ ಅದೇ ರೀತಿ ಶೌಚಾಲಯದ ತ್ಯಾಜ್ಯವನ್ನು ವಿಟ್ಲ ಪರಿಸರಕ್ಕೆ ತರುತ್ತಿರುವ ಮಾಹಿತಿ ಸಾರ್ವಜನಿಕರಿಗೆ ಬಂದಿತ್ತು.

ಸಾರಡ್ಕ ಚೆಕ್ ಪೋಸ್ಟ್ ಪಾಸಾಗುತ್ತಿದ್ದಂತೆ ಎಚ್ಚೆತ್ತ ಸಾರ್ವಜನಿಕರು ವಾಹನವನ್ನು ಬೆನ್ನಟ್ಟಿ ಉಕ್ಕುಡ ದರ್ಬೆಯಲ್ಲಿ ತಡೆದು ವಿಟ್ಲ ಪೊಲೀಸರ ವಶಕ್ಕೆ ನೀಡಿದ್ದಾರೆ. ತ್ಯಾಜ್ಯ ಹೊತ್ತ ಟ್ಯಾಂಕರಿನಿಂದ ಸೋರಿಕೆಯಾಗುತ್ತಿರುವ ಕಾರಣ ರಸ್ತೆಯುದ್ದಕ್ಕೂ ಜನ ಮೂಗುಮುಚ್ಚಿಕೊಂಡೇ ಓಡಾಡುವಂತಾಗಿದೆ.

- Advertisement -

Related news

error: Content is protected !!