- Advertisement -
- Advertisement -


ವಿಟ್ಲ: ಕುಳ ಗ್ರಾಮದ ಓಜಾಲ ಹಿ.ಪ್ರಾ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ, ಪೋಷಕರ ಸಭೆ ಹಾಗೂ ನೂತನ ಎಸ್.ಡಿ.ಎಂ.ಸಿ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ನಡೆಯಿತು.
ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಚಿದಾನಂದ ಪೆಲತ್ತಿಂಜ, ಉಪಾಧ್ಯಕ್ಷರಾಗಿ ಸುಮಯ್ಯ ಅಡ್ಯಾಲು ಕಬಕ, ಸದಸ್ಯರಾಗಿ ಶ್ರೀಧರ, ಕೃಷ್ಣಪ್ಪ , ಶ್ಯಾಮಲ, ನಮಿತ, ಬೀಪಾತುಮ್ಮ, ಝೀನತ್, ತಾಹಿರ, ಮಮತ, ಶಶಿಕಲ, ಲೊಕೇಶ್, ಸುಂದರ ಗೌಡ, ಹೊನ್ನಪ್ಪ ಗೌಡ, ಕೃಷ್ಣಪ್ಪ, ದಯಾನಂದ, ಪುರುಷೋತ್ತಮ, ಶೋಭಾರವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಇಡ್ಕಿದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗೋಕುಲ್ ದಾಸ್ ಭಕ್ತ, ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷೆ ಯಶೋಧ, ಸದಸ್ಯರಾದ ಚಿದಾನಂದ ಪೆಲತ್ತಿಂಜ, ಪ್ರಶಾಂತ್ ಶೆಟ್ಟಿ ಬರೆ, ಮೋಹಿನಿ, ಲಲಿತ, ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷರಾದ ಹೊನ್ನಪ್ಪ ಗೌಡ, ಸುಂದರ ಗೌಡ ಪಾಂಡೇಲು, ಶಾಲಾ ಮುಖ್ಯ ಶಿಕ್ಷಕಿ ವಿಲ್ಮ ಸಿಕ್ವೇರ ಮೊದಲಾದವರು ಉಪಸ್ಥಿತರಿದ್ದರು.ಸಹಶಿಕ್ಷಕರಾದ ಜೆಸಿಂತ ಲೋಬೊ ಸ್ವಾಗತಿಸಿ, ಪರಮೇಶ್ವರಯ್ಯ ಕಾರ್ಯಕ್ರಮ ನಿರೂಪಿಸಿದರು.





- Advertisement -