ಅಧ್ಯಕ್ಷರಾಗಿ ನಾಗೇಶ್ ಪೂಜಾರಿ ಪೂರ್ಲಪ್ಪಾಡಿ ಆಯ್ಕೆ



ವಿಟ್ಲ : ವಿಟ್ಲ ಪಡ್ನೂರು ಗ್ರಾಮದ ಪೂರ್ಲಪ್ಪಾಡಿ ಮೊಸರು ಕುಡಿಕೆ ಉತ್ಸವ ಸಮಿತಿಯ 24ನೇ ವರ್ಷದ ಕಾರ್ಯಕ್ರಮದ ಪದಾಧಿಕಾರಿಗಳ ಆಯ್ಕೆಯು ಆಗಸ್ಟ್ 09 ರಂದು ಪೂರ್ಲಪ್ಪಾಡಿ ಶ್ರೀವರ ವೇದಿಕೆ ವಠಾರದಲ್ಲಿ ನಡೆಯಿತು.
ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ನಾಗೇಶ್ ಪೂಜಾರಿ ಪೂರ್ಲಪ್ಪಾಡಿ, ಗೌರವಾಧ್ಯಕ್ಷರಾಗಿ ಈಶ್ವರ ಭಟ್. ಪಿ ಆಯ್ಕೆಯಾದರು.
ಗೌರವ ಸಲಹೆಗಾರರಾಗಿ ರಾಮಣ್ಣ ಗೌಡ ದೇವರಮನೆ, ಉಪಾಧ್ಯಕ್ಷರಾಗಿ ರಾಜೇಶ್ ಎಂ ಎನ್, ಶ್ರೀಮತಿ ಯೋಗಿತಾ ದೇವಿಪ್ರಸಾದ್, ಪ್ರಧಾನ ಕಾರ್ಯದರ್ಶಿಯಾಗಿ ಜಯಂತ ಪಿ., ಕಾರ್ಯದರ್ಶಿಯಾಗಿ ರುಕುಮ ಗೌಡ ,ಜತೆ ಕಾರ್ಯದರ್ಶಿಗಳಾಗಿ ಕಿರಣ್ ಚಂದ್ರ ಆಳ್ವ, ವಿಜಯ ಪಿ.
ಕೋಶಾಧಿಕಾರಿಯಾಗಿ ಯತೀಶ್ ಪಿ, ಜತೆ ಕೋಶಾಧಿಕಾರಿ ಭರತ್ ಕುಮಾರ್, ಪ್ರಜೇಶ್ ಕೆ, ಕ್ರೀಡಾ ಕಾರ್ಯದರ್ಶಿಗಳಾಗಿ ಧನುಷ್ ಕೆ, ಶ್ರೀಮತಿ ಜಯಲಕ್ಷ್ಮೀ ಕೆ, ಜತೆ ಕ್ರೀಡಾ ಕಾರ್ಯದರ್ಶಿಗಳು ಮನೋಜ್ ಪಿ ಡಿ, ಶ್ರೀಮತಿ ಗೀತಾ ನಡುಮನೆ, ಶ್ರೀಮತಿ ಇಂದಿರಾ ನೀರ್ಜರಿ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಸಂತೋಷ್ ಪಿ, ಶ್ರೀ ವಿಶಾಕ್ ಕೆ. ಆಯ್ಕೆಯಾದರು.
ಸಮಿತಿಗೆ ಒಂಭತ್ತು ಜನ ಸಲಹಾ ಸದಸ್ಯರನ್ನು ಸಹ ಆಯ್ಕೆ ಮಾಡಲಾಯಿತು.








