Thursday, May 2, 2024
spot_imgspot_img
spot_imgspot_img

ವಿಟ್ಲ: ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಎಸ್ ಡಿಪಿಐ ವತಿಯಿಂದ ಪ್ರತಿಭಟನೆ

- Advertisement -G L Acharya panikkar
- Advertisement -

ವಿಟ್ಲ: ಕೇಂದ್ರ ಸರಕಾರವು ಕೋವಿಡ್ ಸಾಂಕ್ರಮಿಕ ಸಂಕಷ್ಟದ ಸಂದರ್ಭದಲ್ಲಿ ಪೆಟ್ರೋಲ್ ಡೀಸೆಲ್ ಹಾಗೂ ಅಡುಗೆ ಅನಿಲ ಅಗತ್ಯವಸ್ತುಗಳ ಬೆಲೆಯನ್ನು ಏರಿಸುವ ಮೂಲಕ ಜನಸಾಮಾನ್ಯರ ಬದುಕಿಗೆ ಕೊಳ್ಳಿಯಿಡುತ್ತಿರುದನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಎಸ್ ಡಿಪಿಐ ವಿಟ್ಲ ನಗರ ಸಮಿತಿ ವತಿಯಿಂದ ಇಂದು ವಿಟ್ಲದ ಬೊಬ್ಬೆಕ್ಕೇರಿಯ ಪೆಟ್ರೋಲ್ ಪಂಪಿನ ಬಳಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಕೊನೆಗೆ ಹಗ್ಗ ಕಟ್ಟಿ ರಿಕ್ಷಾವನ್ನು ಎಳೆಯುವ ಮೂಲಕ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಅಣಕು ಪ್ರದರ್ಶನ ನಡೆಸಲಾಯಿತು.

ಕೇಂದ್ರ ಸರಕಾರ ಕೋವಿಡ್ ಲೊಕ್ಡೌನ್ ನ ಸಂಕಷ್ಟದ ಸಂದರ್ಭದಲ್ಲಿ ಪೆಟ್ರೋಲ್ ದರ ಬೆಲೆಯೇರಿಕೆ ಮಾಡಿ ಜನರನ್ನು ಇನ್ನಷ್ಟು ತೊಂದರೆಗೀಡು ಮಾಡುತ್ತಿದೆ. ಇದು ಮೋದಿ ಸರಕಾರಕ್ಕೆ ಜನರೊಂದಿಗಿನ ಕಾಳಜಿಯನ್ನು ಪ್ರದರ್ಶಿಸುತ್ತದೆ ಎಂದು ಮೊಹಮ್ಮದ್ ರಿಯಾಜ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಎಸ್ ಡಿಪಿಐ ಬಂಟ್ವಾಳ ಅಸೆಂಬ್ಲಿ ಪ್ರಧಾನ ಕಾರ್ಯದರ್ಶಿ ಕಲಂದರ್ ಪರ್ತಿಪ್ಪಾಡಿ, ಪುತ್ತೂರು ಅಸೆಂಬ್ಲಿ ಸಮಿತಿ ಸದಸ್ಯ ಶಾಕೀರ್ ಅಳಕೆಮಜಲ್, ವಲಯಧ್ಯಕ್ಷ ರಹೀಮ್ ಕುಂಡಡ್ಕ, ಪಕ್ಷದ ಸ್ಥಳೀಯ ಮುಖಂಡರಾದ ಅಬ್ದುಲ್ ರಹ್ಮಾನ್ ದೀಪಕ್, ವಿ ಎಸ್ ಮಹಮ್ಮದ್ ಒಕ್ಕೆತ್ತೂರು, ರಿಯಾಜ್ ಮೇಗಿನ ಪೇಟೆ, ರಫೀಕ್ ಪೊನ್ನೋಟ್ ಉಪಸ್ಥಿತರಿದ್ದರು.

- Advertisement -

Related news

error: Content is protected !!