Saturday, June 28, 2025
spot_imgspot_img
spot_imgspot_img

ವಿಟ್ಲ: ಪಟ್ಟಣ ಪಂಚಾಯತ್‌ನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ರವಿಪ್ರಕಾಶ್ ವಿಟ್ಲ

- Advertisement -
- Advertisement -

ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ರವಿಪ್ರಕಾಶ್ ವಿಟ್ಲ ಇವರು ಆಯ್ಕೆಯಾದರು.

ವಿಟ್ಲ ಪಟ್ಟಣ ಪಂಚಾಯತ್‌‌ನ 18 ಸ್ಥಾನಗಳಲ್ಲಿ 12 ಸ್ಥಾನಗಳು ಬಿಜೆಪಿ ಸದಸ್ಯರಿದ್ದು, ಸ್ಥಾಯಿ ಸಮಿತಿಯಲ್ಲಿ ಒಟ್ಟು 9 ಸದಸ್ಯರಿರುತ್ತಾರೆ. ಪುತ್ತೂರು ಬಿಜೆಪಿ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್‌ ಇಂದು ವಿಟ್ಲ ಬಿಜೆಪಿ ಕಛೇರಿಯಲ್ಲಿ ರವಿಪ್ರಕಾಶ್ ವಿಟ್ಲ ಇವರ ಹೆಸರನ್ನು ಭಾರತೀಯ ಜನತಾ ಪಾರ್ಟಿ ವತಿಯಿಂದ ಸೂಚಿಸಿದರು. ನಂತರ ವಿಟ್ಲ ಪಟ್ಟಣ ಪಂಚಾಯತ್‌‌ನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪಟ್ಟಣ ಪಂಚಾಯತ್‌ನ ಸದಸ್ಯ ಅಶೋಕ್‌ ಕುಮಾರ್‌ ಶೆಟ್ಟಿ ರವಿಪ್ರಕಾಶ್ ಇವರ ಹೆಸರನ್ನು ಸೂಚಿಸಿದರು. ಸದಸ್ಯೆ ವಿಜಯಲಕ್ಷ್ಮೀಯವರು ಅವರ ಹೆಸರನ್ನು ಅನುಮೋದಿಸಿದರು.

ರವಿಪ್ರಕಾಶ್ ವಿಟ್ಲರವರು ಹಿಂದೆಯು ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ವಿಟ್ಲ ಪಟ್ಟಣ ಪಂಚಾಯತ್‌ನ ಸದಸ್ಯರಾಗಿ ಮತ್ತು ಬಿಜೆಪಿಯ ಕಾರ್ಯಕರ್ತರಾಗಿ ಹಾಗೂ ವಿವಿಧ ಜವಬ್ದಾರಿಗಳನ್ನು ಹೊಂದಿದ್ದರು.

- Advertisement -

Related news

error: Content is protected !!