- Advertisement -
- Advertisement -
ವಿಟ್ಲದ ಮಂಗಲಪದವು ನಿವಾಸಿ ನಿವೃತ್ತ ಸೈನಿಕ ಕೂಸಪ್ಪ ಶೆಟ್ಟಿ(81) ವಯೋ ಸಹಜವಾಗಿ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.
ಇವರು ಪುತ್ತೂರು ಮಾಜಿ ಸೈನಿಕ ಸಂಘದ ಅತ್ಯಂತ ಹಿರಿಯ ಸದಸ್ಯರಾಗಿದ್ದರು. ಭಾರತೀಯ ಭೂಸೇನೆಯಲ್ಲಿ 20 ವರ್ಷಗಳ ಸೇವೆ ಗೈದಿದ್ದ ಇವರು 1962 ಮತ್ತು 1971 ರ ಯುದ್ಧಗಳಲ್ಲಿ ಭಾಗವಹಿಸಿದ್ದರು.
ಪುತ್ತೂರು ಮಾಜಿ ಸೈನಿಕ ಸಂಘದ ಅಧ್ಯಕ್ಷ ಯಂ ಕೆ ನಾರಾಯಣ ಭಟ್, ಉಪಾಧ್ಯಕ್ಷ ದಾಸಪ್ಪ ಪೂಜಾರಿ, ಕಾರ್ಯದರ್ಶಿ ನಾಗಪ್ಪಗೌಡ ಮತ್ತು ಅನೇಕ ಮಂದಿ ಮಾಜಿ ಸೈನಿಕರು ಮೃತರ ಅಂತಿಮ ದರ್ಶನ ಪಡೆದರು. ಮೃತರ ಗೌರವಾರ್ಥವಾಗಿ ಮಾಜಿ ಸೈನಿಕ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರು ಮಾಲಾರ್ಪಣೆ ಮಾಡಿದರು. ನಂತರ ಸೇರಿದ್ದ ಎಲ್ಲ ಸೈನಿಕರೂ ಸಲ್ಯೂಟ್ ನೀಡಿ ಅಂತಿಮ ವಿದಾಯ ಕೋರಿದರು.
ಮೃತರು ಪತ್ನಿ, ಪುತ್ರ ಯೆನೆಪೋಯಾ ಇಂಜಿನಿಯರಿಂಗ್ ಕಾಲೇಜಿನ ಸಹಪ್ರಾಂಶುಪಾಲ ಡಾ. ಪ್ರಭಾಕರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
- Advertisement -