Thursday, April 25, 2024
spot_imgspot_img
spot_imgspot_img

‘ಸಮಸ್ತ’ ಹನೀಫಿ ಉಲಮಾ ಒಕ್ಕೂಟದಿಂದ ಮದ್ರಸ ಅಧ್ಯಾಪಕರಿಗೆ ಆಹಾರದ ಕಿಟ್ ವಿತರಣೆ

- Advertisement -G L Acharya panikkar
- Advertisement -

ವಿಟ್ಲ: ಅ.8 ಇಂದಿನ ಸಂದಿಗ್ಧ ಘಟ್ಟದಲ್ಲಿ ಕೆಲಸ ಮತ್ತು ವೇತನ ವಿಲ್ಲದೆ ಸಂಕಷ್ಟದಲ್ಲಿರುವ ಸುಮಾರು ಐವತ್ತಕ್ಕೂ ಮಿಕ್ಕಿದ ಮದ್ರಸ ಅಧ್ಯಾಪಕರಿಗೆ ಕರ್ನಾಟಕ ರಾಜ್ಯ ‘ಸಮಸ್ತ’ ಹನೀಫಿ ಉಲಮಾ ಒಕ್ಕೂಟದ ವತಿಯಿಂದ ದಿನ ಬಳಕೆಯ ದಿನಸಿ ಸಾಮಾನುಗಳ ಕಿಟ್ ಗಳನ್ನು ಹಾಗೂ ಎರಡು ಹೆಣ್ಮಕ್ಕಳ ವಿವಾಹ ಕಾರ್ಯಕ್ಕೆ ಧನಸಹಾಯವನ್ನು ಇಂದು ವಿಟ್ಲ ದಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿತರಿಸಲಾಯಿತು.

ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದ ‘ಸಮಸ್ತ’ ಕೇಂದ್ರ ಮುಶಾವರ ಸದಸ್ಯ ಬಿ.ಕೆ. ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಅವರು ಕೋವಿಡ್ -19 ಲಾಕ್ ಡೌನ್ ನಿಂದಾಗಿ ಅದೆಷ್ಟೋ ಮದ್ರಸ ಅಧ್ಯಾಪಕರು ವೇತನ ವಿಲ್ಲದೆ ಹಾಗೂ ಕೆಲಸವನ್ನೂ ಕಳಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ, ಅಂತಹ ಮುಅಲ್ಲಿಮರಿಗೆ ಕೆಲ ಮೊಹಲ್ಲಾ ಸಮಿತಿಗಳು ,ಮತ್ತು ಸಂಘಸಂಸ್ಥೆಗಳು ನೆರವಾಗುತ್ತಿದ್ದು ,ಇದೀಗ ‘ಸಮಸ್ತ’ ಹನೀಫಿ ಉಲಮಾ ಸಂಘಟನೆಯವರು ಎರಡನೆಯ ಹಂತದ ಕಿಟ್ ವಿತರಣೆ ನಡೆಸುತ್ತಿರುವುದು ಶ್ಲಾಘನೀಯ ಎಂದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೌಲನಾ ಉಲಮಾ ಉಮರಾ ಸಾದಾತ್ ಮಜ್ಲಿಸ್ ಅಧ್ಯಕ್ಷ ಕಬಕ ಮೌಲನಾ ಅಬ್ದುರ್ರಝಾಕ್ ಉಸ್ತಾದ್ ಮಲೇಷ್ಯಾ ಅವರು ಮಾತನಾಡಿ, ಮಕ್ಕಳಿಗೆ ಧರ್ಮ ಹಾಗೂ ಸಂಸ್ಕೃತಿಯನ್ನು ಕಲಿಸಿ ಕೊಟ್ಟು ಅವರನ್ನು ನಾಡಿನ ಸತ್ಪ್ರಜೆಗಳಾಗಿ ರೂಪಿಸುವ ಮದ್ರಸ ಅಧ್ಯಾಪಕರಿಗೆ ಇಸ್ಲಾಂ ಉನ್ನತ ಸ್ಥಾನವನ್ನು ನೀಡಿದ್ದು, ಅಂತಹ ಮುಅಲ್ಲಿಮರಿಗೆ ನೆರವಾಗುವುದು ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ ಎಂದರು.

ಎಸ್ಕೆಎಸ್ಸಸ್ಸೆಫ್ ರಾಜ್ಯಾಧ್ಯಕ್ಷ. ಅನೀಸ್ ಕೌಸರಿ , ದ.ಕ.ಜಿಲ್ಲಾ ಎಸ್ಕೆಎಸ್ಸಸ್ಸೆಫ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ಹನೀಫಿ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ಹನೀಫಿ ಮರ್ದಾಳ ಮೊದಲಾದವರು ಮಾತನಾಡಿದರು.


‘ಸಮಸ್ತ’ ವಿದ್ಯಾಭ್ಯಾಸ ಬೋರ್ಡ್ ಸದಸ್ಯ ಅಬ್ದುರ್ರಶೀದ್ ಹಾಜಿ ಪರ್ಲಡ್ಕ, ವಿಟ್ಲ ರೇಂಜ್ ಮದ್ರಸ ಮ್ಯಾನೆಜ್‌ಮೆಂಟ್‌ ಅಧ್ಯಕ್ಷ ಶರೀಫ್ ಮೂಸ ಕುದ್ದುಪದವು, ಪುತ್ತೂರು ಎಸ್ಕೆಎಸ್ಸಸ್ಸೆಫ್ ವಿಖಾಯ ಪ್ರಮುಖ ಸಿದ್ದೀಕ್ ಸುಲ್ತಾನ್, ಇಬ್ರಾಹಿಂ ಹನೀಫಿ ಬುಡೋಳಿ, ಅಬ್ದುರ್ರಝಾಕ್ ಹನೀಫಿ ಕಕ್ಕಿಂಜೆ , ಉಬೈದ್ ವಿಟ್ಲ ಬಜಾರ್, ಶರೀಫ್ ಕೆಲಿಂಜ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದಾವೂದ್ ಹನೀಫಿ ಕೃಷ್ಣಾಪುರ ಮತ್ತು ಅಬ್ದುಲ್ ಗಫೂರ್ ಹನೀಫಿ ವಿಟ್ಲ ಅವರು ಪ್ರವಾದಿ ಮದ್ಹ್ ಗೀತೆ ಹಾಡಿದರು.ಸಮಿತಿಯ ಅಧ್ಯಕ್ಷ ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ ಅವರು ಸ್ವಾಗತಿಸಿ ಸಂಘಟನೆಯ ಯೋಜನೆಯ ಬಗ್ಗೆ ವಿವರಿಸಿದರು, ಇಸ್ಮಾಯಿಲ್ ಹನೀಫಿ ವಿಟ್ಲ ವಂದಿಸಿದರು.

- Advertisement -

Related news

error: Content is protected !!