Friday, May 17, 2024
spot_imgspot_img
spot_imgspot_img

ವಿಟ್ಲ : ಕೆಲಿಂಜ ಹಿ.ಪ್ರಾ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

- Advertisement -G L Acharya panikkar
- Advertisement -

ವಿಟ್ಲ : ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಕೆಲಿಂಜದಲ್ಲಿ 2023-24 ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವವು ಮೇ. 31 ರಂದು ಮಕ್ಕಳನ್ನು ಬ್ಯಾಂಡ್ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಕರೆತರುವ ಮೂಲಕ ನಡೆಯಿತು.

ಎಲ್ಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ, ಉಚಿತ ಸಮವಸ್ತ್ರ, ಉಚಿತ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಸುರೇಶ್ ಶೆಟ್ಟಿ ಮತ್ತು ಜಯರಾಮ ಶೆಟ್ಟಿ ಮುಂಬಯಿಯವರು ಎಲ್ಲಾ ಮಕ್ಕಳಿಗೂ ನೋಟ್ ಪುಸ್ತಕವನ್ನು ಉಚಿತವಾಗಿ ನೀಡಿದರು.

ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷೆ ಜಯಂತಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಪೆಲತ್ತಡ್ಕ, ಉಪಾಧ್ಯಕ್ಷ ಎನ್. ಹಮೀದ್, ತಾಲೂಕು ಶಿಕ್ಷಣ ಸಂಯೋಜಕಿ ಪ್ರತಿಮಾ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಸೀನಾಜೆ, ಕೋಶಾಧಿಕಾರಿ ದೇವಪ್ಪ ಗೌಡ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಸಂದೀಪ್ ಮತ್ತು ಜಯಪ್ರಸಾದ್ ಉಪಸ್ಥಿತರಿದ್ದರು.

ಬಳಿಕ ಮಧ್ಯಾಹ್ನ ಬಿಸಿಯೂಟದೊಂದಿಗೆ ಸಿಹಿಯೂಟ ನೀಡಲಾಯಿತು. ಸುಮಾರು 30 ಮಕ್ಕಳು ಹೊಸದಾಗಿ ಶಾಲೆಗೆ ಸೇರ್ಪಡೆಗೊಂಡರು.

- Advertisement -

Related news

error: Content is protected !!