Friday, March 5, 2021

ವಿಟ್ಲ: ವಿಠಲ ಪ್ರೌಢ ಶಾಲೆಯಲ್ಲಿ ಗಣರಾಜ್ಯೋತ್ಸವ ಸಂಭ್ರಮ !

ವಿಟ್ಲ: ವಿಠಲ ಪ್ರೌಢ ಶಾಲೆಯಲ್ಲಿ ಗಣರಾಜ್ಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂಸ್ಥೆಯ ಹಿರಿಯ ವಿದ್ಯಾರ್ಥಿ ಪ್ರಸ್ತುತ ಭಾರತೀಯ ಸೇನೆಯ ಸಿಯಾಚಿನ್ ಪ್ರಾಂತ್ಯದಲ್ಲಿ ಜೂನಿಯರ್ ಕಮಿಷನರ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿರುವ ಧನಂಜಯ್ ಎಂ ಇವರು ಧ್ವಜರೋಹಣಗೈದು ಗಣರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು.

ಶಿಕ್ಷಕ ರಮೇಶ್ ಬಿ.ಕೆ ಇವರು ಗಣರಾಜ್ಯೋತ್ಸವ ಆಚರಣೆಯ ಮಹತ್ವದ ಕುರಿತು ಮಾತನಾಡಿದರು. ಶಿಕ್ಷಕಿ ಶ್ರೀಮತಿ ಲೀಲಾ ಡಿ ನಾಯಕ್ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು. ಸಮಾರಂಭದಲ್ಲಿ ವಿಠಲ ವಿದ್ಯಾ ಸಂಘದ ಆಡಳಿತ ಮಂಡಳಿಯ ಸದಸ್ಯರಾದ ಪದ್ಮಯ್ಯ ಗೌಡ, ಬಾಬು ಕೊಪ್ಪಳ, ನಿತ್ಯಾನಂದ ನಾಯಕ ಹಾಗೂ ಸಂಸ್ಥೆಯ ಎಲ್ಲಾ ನೌಕರ ವೃಂದದವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಕಳೆದ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯ ಹಿಂದಿ ವಿಷಯದಲ್ಲಿ 100 ಅಂಕ ಗಳಿಸಿದ ಆಯಿಷತ್‌ ಶಮ್ನ ಇವರನ್ನು ಅಭಿನಂದಿಸಲಾಯಿತು. ಹಿಂದಿ ಶಿಕ್ಷಕ ಸುಮಂಗಳ ಎನ್ ಸಿ ನಗದು ಬಹುಮಾನವನ್ನು ವಿತರಿಸಿದರು. ಉಪಪ್ರಾಂಶುಪಾಲರಾದ ಕಿರಣ್ ಕುಮಾರ್ ಸ್ವಾಗತಿಸಿದರು. ಶಿಕ್ಷಕರಾದ ರಾಜಶೇಖರ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಆಶಾ ಮೇಡಂ ಧನ್ಯವಾದ ಅರ್ಪಿಸಿದರು.

- Advertisement -

MOST POPULAR

HOT NEWS

Related news

error: Content is protected !!