- Advertisement -
- Advertisement -
ವಿಟ್ಲ: ವಿಟ್ಲ ಚರ್ಚ್ ರಸ್ತೆಯಲ್ಲಿ ಎರಡು ಸ್ಕೂಟರ್ ಗಳು ಮುಖಾಮುಖಿ ಡಿಕ್ಕಿಯಾಗಿದ್ದ ಘಟನೆ ನಿನ್ನೆ ಸಂಜೆ ನಡೆದಿದೆ.

ಅಪಘಾತದಲ್ಲಿ ಸ್ಕೂಟರ್ ಸವಾರರು ಮತ್ತು ಸಹ ಸವಾರರು ಗಂಭೀರ ಗಾಯಗೊಂಡಿದ್ದು,ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಟ್ಲ ನಿವಾಸಿಗಳಾದ ಅಫ್ನಾಜ಼್, ಸಮಾದ್ ಹಾಗೂ ಚಂದಳಿಕೆ ನಿವಾಸಿ ದೂಮಣ್ಣ ಗೌಡ ಗಂಭೀರ ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ. ವಿಟ್ಲ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.


- Advertisement -