- Advertisement -
- Advertisement -
ವಿಟ್ಲ: ಎಸ್ ಡಿ ಪಿ ಐ ವಿಟ್ಲದ ಮೇಗಿನಪೇಟೆಯಲ್ಲಿ ಪಕ್ಷದ ಸದಸ್ಯತ್ವ ಅಭಿಯಾನ ನಡೆಯಿತು. ಈ ಸಂದರ್ಭ ಹಲವು ಮಂದಿ ಯುವಕರು ಪಕ್ಷಕ್ಕೆ ಸೇರ್ಪಡೆಗೊಂಡರು.

ಎಸ್ ಡಿ ಪಿ ಐ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಅವರು ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಸೇರ್ಪಡೆಗೊಳಿಸಿದರು. ಇದೇ ಸಂದರ್ಭ ಮೇಗಿನಪೇಟೆ ಬ್ರಾಂಚ್ ನ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ರಫೀಕ್ ಪೊನ್ನೋಟ್ಟು ಹಾಗೂ ಜತೆ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ನಾಸೀರ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಎಸ್ ಡಿ ಪಿ ಐ ವಿಟ್ಲ ವಲಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಕುಂಡಡ್ಕ, ಮುಖಂಡರಾದ ಶಾಕೀರ್ ಅಳಕೆಮಜಲು, ಖಲಂದರ್ ಪರ್ತಿಪ್ಪಾಡಿ, ಮೊದಲಾದವರು ಉಪಸ್ಥಿತರಿದ್ದರು.


- Advertisement -