Monday, August 17, 2026
spot_imgspot_img
spot_imgspot_img

ವಿಟ್ಲ: ಕಡಂಬು ಸರ್ಕಾರಿ ಶಾಲಾ ಮಕ್ಕಳಿಗೆ ಉದ್ಯಮಿ ಕಿಶೋರ್ ಕುಮಾರ್ ಕೊಡ್ಲಮೊಗರು ಇವರ ಸಹಕಾರದಿಂದ, ಲಯನ್ಸ್ ಕ್ಲಬ್ ವಿಟ್ಲ ವತಿಯಿಂದ ಸ್ಕ್ವಾಡ್ ಡ್ರೆಸ್ ವಿತರಣೆ

- Advertisement -
- Advertisement -

ವಿಟ್ಲ: ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಕಡಂಬು ಇಲ್ಲಿನ ಗ್ರಾಮೀಣ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಹಾದಾನಿಗಳಾದ ಉದ್ಯಮಿ ಕಿಶೋರ್ ಕುಮಾರ್ ಕೊಡ್ಲಮೊಗರು ಇವರ ಸಹಕಾರದಿಂದ ಲಯನ್ಸ್ ಕ್ಲಬ್ ವಿಟ್ಲ ಸಿಟಿ ವತಿಯಿಂದ ಶಾಲಾ ಮಕ್ಕಳಿಗೆ ಸ್ಕ್ವಾಡ್ ಡ್ರೆಸ್ ಅನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ನ ನಿಕಟಪೂರ್ವ ಜಿಲ್ಲಾ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯಾರ್, ಲಯನ್ಸ್ ಕ್ಲಬ್ ವಿಟ್ಲ ಸಿಟಿ ಅಧ್ಯಕ್ಷರಾದ ಶ್ರೀಮತಿ ಶ್ವೇತಾ ರವಿಕುಮಾರ್, ಲಯನ್ಸ್ ಕ್ಲಬ್ ವಿಟ್ಲ ಸಿಟಿ ಉಪಾಧ್ಯಕ್ಷರಾದ ಚಂದ್ರಹಾಸ ಗೌಡ, ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಖಜಾಂಜಿ ಒ. ಎ.ಕೃಷ್ಣ, ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಸದಸ್ಯರಾದ ಮೋಹನ್ ಕಟ್ಟೆ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಬಿ.ಎಂ ಹಾಸೈನಾರ್, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಗೀತಾ ಎಸ್, ಶಾಲಾ ಸಹ ಶಿಕ್ಷಕರಾದ ಶ್ರೀಮತಿ ಶೋಭಾಲತಾ ಯಂ, ಶ್ರೀಮತಿ ರಶ್ಮಿ ಎಂ.ವಿ, ಗೌರವ ಶಿಕ್ಷಕರಾದ ಶ್ರೀಮತಿ ತೃಪ್ತಿ, ಕುಮಾರಿ ಮೌರುಫ, ಪೋಷಕರು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.

- Advertisement -

Related news

error: Content is protected !!