Tuesday, March 2, 2021

ವಿಟ್ಲ ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಕರ್ನಾಟಕದ ಮೀನುಗಾರಿಕ ಮತ್ತು ಬಂದರು ಸಚಿವರಾದ ಎಸ್. ಅಂಗಾರ ಭೇಟಿ

ವಿಟ್ಲ: ಪ್ರಪ್ರಥಮ ಬಾರಿಗೆ ವಿಟ್ಲ ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಕರ್ನಾಟಕದ ಮೀನುಗಾರಿಕ ಮತ್ತು ಬಂದರು ಸಚಿವರಾದ ಎಸ್. ಅಂಗಾರ ಭೇಟಿ ನೀಡಿದರು.ಇವರಿಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸಾಥ್ ನೀಡಿದರು.ದೇವರ ದರ್ಶನ ಪಡೆದ ನಂತರ ಪಂಚ ಶ್ರೀ ಗ್ರೂಪ್ ನಿಂದ ನೂತನ ಸಚಿವರಿಗೆ ಸನ್ಮಾನ ಮಾಡಲಾಯಿತು.

ಬಿಜೆಪಿ ಮುಖಂಡರಾದ ಅರುಣ್ ವಿಟ್ಲ,ಹರಿಪ್ರಸಾದ್ ಯಾದವ್,ದಯಾನಂದ್ ಶೆಟ್ಟಿ ಉಜಿರೆಮಾರ್,ಕರುಣಾಕರ ಗೌಡ ನಾಯಿತೊಟ್ಟು,ಮಂಜುನಾಥ ಕಲ್ಲಕಟ್ಟ,ಸಂಕಪ್ಪ ಗೌಡ,ಹರೀಶ್,ವೀರಪ್ಪ ಗೌಡ,ಜಯಂತ್ ನಾಯ್ಕ,ಲೋಕನಾಥ್ ವಿಟ್ಲ,ರವಿಪ್ರಕಾಶ್, ಶ್ರೀ ಕೃಷ್ಣ ಮುದೂರು,ದೇವದಾಸ್ ಶೆಟ್ಟಿ ಬಂಟ್ವಾಳ,ವೆಂಕಟ್ ವಲಂಬಯಿ,ರಾಮ್ ದಾಸ್ ಹಾರಾಡಿ ಇವರು ಸಚಿವರನ್ನು ಬರಮಾಡಿಕೊಂಡರು.ವಿಟ್ಲ ಅರಮನೆಯ ಕೃಷ್ಣಯ್ಯ.ಕೆ ಮತ್ತು ದೇವಸ್ಥಾನದ ಅರ್ಚಕರು ಸಚಿವರನ್ನು ಗೌರವಿಸಿದರು.

- Advertisement -

MOST POPULAR

HOT NEWS

Related news

error: Content is protected !!