Saturday, June 28, 2025
spot_imgspot_img
spot_imgspot_img

ವಿಟ್ಲ: ರಸ್ತೆ ಬದಿಯಲ್ಲಿ ಬಿದ್ದು ಸಿಕ್ಕಿದ ಹಣವನ್ನು ಪೊಲೀಸರ ಕೈಗೆ ನೀಡಿ ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿಗಳು

- Advertisement -
- Advertisement -

ರಸ್ತೆ ಬದಿಯಲ್ಲಿ ಬಿದ್ದು ಸಿಕ್ಕಿದ ಹಣವನ್ನು ಶಾಲಾ ವಿದ್ಯಾರ್ಥಿಗಳು ಪೊಲೀಸರಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದ ಘಟನೆ ವಿಟ್ಲ ಪರಿಸರದ ವ್ಯಾಪ್ತಿಯಲ್ಲಿ ಕಂಡುಬಂದಿದೆ.

ವಿಟ್ಲ ಸೈಂಟ್‌ ರೀಟಾ ಆಂಗ್ಲ ಮಾಧ್ಯಮ ಶಾಲೆಯ 8 ನೇ ತರಗತಿ ವಿದ್ಯಾರ್ಥಿಗಳಾದ ಶ್ರೀಶಾ, ಕೌಶಲ್‌, ವಿನೋಶ್‌ ಎಂಬವರು ಶಾಲೆಯಿಂದ ಮನೆ ಕಡೆ ತೆರಳುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ 2600/- ರೂ. ಹಣ ಬಿದ್ದು ಸಿಕ್ಕಿದೆ. ಕೂಡಲೇ ಈ ವಿದ್ಯಾರ್ಥಿಗಳು ಹಣವನ್ನು ಸಂಚಾರ ಕರ್ತವ್ಯದಲ್ಲಿದ್ದ ಪೊಲೀಸರಿಗೆ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ. ವಿದ್ಯಾರ್ಥಿಗಳ ಈ ಪ್ರಾಮಾಣಿಕತೆಗೆ ವಿಟ್ಲ ಠಾಣಾ ಪೊಲೀಸರು, ಹಾಗೂ ಶಾಲಾ ಶಿಕ್ಷಕವೃಂದ ಹಾಗೂ ಹೆತ್ತವರು, ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!