

ವಿಟ್ಲ: 38 ವರ್ಷಗಳ ಇತಿಹಾಸ, ಸೇವಾ ಪರಂಪರೆ ಮತ್ತು ಪರಿಶುದ್ಧತೆಯ ಪ್ರತೀಕವಾಗಿರುವ ಟೋಪ್ಕೋ ಸಮೂಹ ಸಂಸ್ಥೆಗಳ ಟೋಪ್ಕೋ ವಿಟ್ಲದ ಪುತ್ತೂರು ರಸ್ತೆಯ ಎಂಪೈರ್ ಮಾಲ್‌ನಲ್ಲಿ ಪ್ರಾರಂಭವಾಗಿ 12 ವರ್ಷಗಳು ಕಳೆದಿದ್ದು, ಜ.22ರಂದು ನವೀಕೃತ ಮಳಿಗೆಯ ಉದ್ಘಾಟನಾ ಸಮಾರಂಭ ನಡೆಯಿತು.

ಈ ಸಂದರ್ಭಲ್ಲಿ ಕುಂಬೋಲ್ ಸಯ್ಯದ್ ಕೆ.ಎಸ್. ಆಟಕೋಯ ತಂಙಳ್‌ರವರು ಮತನಾಡಿ ಚಿನ್ನಾಭರಣ ವ್ಯವಹಾರದಲ್ಲಿ ಅನುಭವ ಹೊಂದಿದ ಜನರ ವಿಶ್ವಸನೀಯ ಸಂಸ್ಥೆ ಇದಾಗಿದೆ. ನವ ವಿನ್ಯಾಸದ ಆಭರಣಗಳ ಸಂಗ್ರಹವೇ ಇಲ್ಲಿದೆ. ಪೇಟೆ ಪಟ್ಟಣ ಬೆಳೆಯುತ್ತಿದ್ದಂತೆ ಅದಕ್ಕೆ ತಕ್ಕುದಾಗಿ ಸಂಸ್ಥೆಯ ಅಂದವನ್ನು ಮತ್ತಷ್ಟು ಹೆಚ್ಚಿಸುವುದು ಅನಿವಾರ್ಯವಾಗಿದೆ. ಚಿನ್ನಾಭರಣ ಮಳಿಗೆಯನ್ನು ಇನ್ನಷ್ಟು ವಿಸ್ತರಿಸುವ ಮೂಲಕ ಜನರಿಗೆ ಉತ್ತಮ ಸೇವೆ ನೀಡುವಂತಾಗಲಿ. ಜಾತಿ ಮತ ಧರ್ಮವಿಲ್ಲದೆ ಸಂಸ್ಥೆ ಮುನ್ನಡೆದರೆ ಯಶಸ್ಸು ಹೆಚ್ಚು. ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಹೇಳಿದರು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿರವರು ಮಾತನಾಡಿ ಇದೊಂದು ಸಂಭ್ರಮ ಸಂತಸದ ಕ್ಷಣವಾಗಿದೆ. ಧರ್ಮ ಪ್ರಜ್ಞೆಯಿಂದ ನಡೆದಾಗ ಎಲ್ಲರ ಬದುಕು ಬಂಗಾರವಾಗುತ್ತದೆ. ಧರ್ಮ ಶ್ರದ್ಧೆ ಇದ್ದಲ್ಲಿ ಶಾಂತಿ, ಸಮಾನತೆ, ಸೌಹಾರ್ದತೆ ಸಾಧ್ಯ. ವ್ಯಕ್ತಿಗೆ ವ್ಯಕ್ತಿತ್ವ ಮೈಗೂಡಿದಾಗ ಬದುಕು ಹಸನಾಗುತ್ತದೆ. ಪ್ರಾಮಾಣಿಕತೆಯ ವ್ಯಾಪಾರ ನಡೆದಾಗ ಯಶಸ್ಸು ಸಾಧ್ಯ. ಧರ್ಮ ಸಮಾನತೆಯ ಸೋಪಾನ. ಸಂಸ್ಥೆಯ ಜೀವಾಳ ಗ್ರಾಹಕರು. ಟೋಪ್ಕೋ ಟಾಪ್ ನಲ್ಲಿ ಸಾಗಲಿ. ಸಂಸ್ಥೆಗೆ ಇನ್ನಷ್ಟು ಯಶಸ್ಸಾಗಲಿ ಎಂದರು.

ವಿಟ್ಲ ಚರ್ಚ್ ನ ರೆವರೆಂಡ್ ಫಾದರ್ ಐವನ್ ಮೈಕಲ್ ರಾಡ್ರಿಗಸ್‌ರವರು ಮಾತನಾಡಿ ಸಂತೃಪ್ತ ಗ್ರಾಹಕರ ದೊಡ್ಡ ಬಳಗವೇ ಇಲ್ಲಿದೆ. ಅತೀ ಕಡಿಮೆ ಬೆಲೆಗೆ ಸ್ವರ್ಣಾಭರಣ ನೀಡುವ ವಿಶ್ವಸನೀಯ ಸಂಸ್ಥೆ ಇದಾಗಿದ್ದು, ಸಂಸ್ಥೆಯಿಂದ ಗ್ರಾಹಕರಿಗೆ ಇನ್ನಷ್ಟು ಸಂತೃಪ್ತ ಸೇವೆ ಸಿಗುವಂತಾಗಲಿ. ಇದೊಂದು ಸೌಹಾರ್ದ ಸಂದೇಶ ಸಾರಿದ ಕಾರ್ಯಕ್ರಮವಾಗಿದೆ. ಎಲ್ಲಾ ದರ್ಮದ ಧರ್ಮಗುರುಗಳನ್ನು ಕಾರ್ಯಕ್ರಮಕ್ಕೆ ಕರೆಸಿ ಆ ಮೂಲಕ ಸೌಹಾರ್ದತೆಯ ಸಂದೇಶ ಸಾರಿದೆ. ಪ್ರೀತಿ ಸೌಹಾರ್ದತೆಯ ಜೀವನ ನಮ್ಮದಾಗಲಿ. ಜಾತಿ, ಧರ್ಮ ಬೇಧ ಮರೆತು ಸಂಸ್ಥೆಯನ್ನು ಬೆಳೆಸೋಣ ಎಂದರು.

ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್.ಮಹಮ್ಮದ್ ರವರು ಮಾತನಾಡಿ ಶಾಂತಿಯ ಸಂದೇಶ ಸಾರುವ ಕೆಲಸ ಇಂದಿಲ್ಲಿ ನಡೆದಿದೆ. ವಿಟ್ಲಕ್ಕೆ ಗೌರವ ತರುವ ಕೆಲಸ ಸಂಸ್ಥೆಯಿಂದಾಗಿದೆ. ಮಾಲಕರು ಕೇವಲ ಲಾಭದ ಉದ್ದೇಶವನ್ನು ಇಟ್ಟುಕೊಂಡು ಸಂಸ್ಥೆ ನಡೆಸದೆ ಅದರಲ್ಲಿ ಬಂದ ಲಾಭದ ಒಂದಂಶವನ್ನು ಸಮಾಜದಲ್ಲಿರುವ ಬಡ ಬಗ್ಗರಿಗೆ ನೀಡುವ ಕೆಲಸ ನಿರಂತರವಾಗಿ ನಡೆಯುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಂಸ್ಥೆಯ ಬೆಳವಣಿಗೆಗೆ ಕಾರಣೀಭೂತರಾಗಬೇಕಿದೆ. ಸಿಬ್ಬಂದಿಗಳ ನಗುಮುಖದ ಸೇವೆ ಸಂಸ್ಥೆ ಬೆಳವಣಿಗೆಗೆ ಪೂರಕ. ಚಿನ್ನದ ಹಾಗೆ ಸಂಸ್ಥೆ ಇನ್ಜಷ್ಟು ಪ್ರಕಾಶಿಸಲಿ ಎಂದರು.

ಇದೇ ಸಂದರ್ಭದಲ್ಲಿ ಅತ್ಯಾಧುನಿಕ ರೋಸ್ ಗೋಲ್ಡ್ ಆಭರಣವನ್ನು ಅನಾವರಣಗೊಳಿಸಲಾಯಿತು. ಸಂಸ್ಥೆ ನಡೆದು ಬಂದ ಹಾದಿ ಹಾಗೂ ಸಂಸ್ಥೆಯ ಬಗೆಗಿನ ಮಾಹಿತಿ ಉಳ್ಳ ಬ್ರೌಶರ್ ಅನ್ನು ಸರ್ವಧರ್ಮದ ಗುರುಗಳು ಬಿಡುಗಡೆ ಮಾಡಿದರು. ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಕುದ್ರೋಳಿ ಗಣೇಶ್ ಅವರ “ಅಬ್ರಕಡಬ್ರ” ಜಾದೂ ಪ್ರದರ್ಶನ ನಡೆಯಿತು. ಉದ್ಘಾಟನೆ ಪ್ರಯುಕ್ತ ಶೇಕಡಾ 5 ಮೇಕಿಂಗ್ ಚಾರ್ಜ್, ಡೈಮಂಡ್, ಬೆಳ್ಳಿ ಆಭರಣಗಳ ಮೇಲೆ ಶೇಕಡಾ 10 ಡಿಸ್ಕೌಂಟ್, ಆಯ್ದ ಗ್ರಾಹಕರಿಗೆ ಲಕ್ಕಿ ಡೈಮಂಡ್ ರಿಂಗ್, 200 ಸಾರ್ವಜನಿಕರಿಗೆ ಸ್ಪೆಷಲ್ ಗಿಫ್ಟ್ ನೆರವೇರಿತು.

ವಿಟ್ಲ ಜುಮಾ ಮಸೀದಿ ಮುದರ್ರಿಸ್ ದಾವೂದ್ ಹನೀಫಿ, ವಿಟ್ಲ ಟೌನ್ ಮಸೀದಿ ಖತೀಬ್ ಅಬ್ಬಾಸ್ ಮದನಿ, ಸಂಸ್ಥೆಯ ಚೇಯರ್ ಮ್ಯಾನ್ ಪಿ ಸಿ ಮೂಸಾ ಹಾಜಿ, ಆಡಳಿತ ನಿರ್ದೇಶಕ ಅಬ್ದುಲ್ ಅಝೀಜ್ ಟಿ.ಕೆ, ವಿಟ್ಲ ಶೋ ರೂಮ್ ಮುಖ್ಯಸ್ಥರಾದ ಮಹಮ್ಮದ್ ಟಿ.ಕೆ, ಪಾಲುದಾರರಾದ ನಝೀರ್ ಟಿ.ಕೆ, ಮುನೀರ್ ಟಿ.ಕೆ, ಮಹಮ್ಮದ್ ಅಸ್ಲಂ ಟಿ.ಕೆ, ರಫೀಕ್ ಹಾಜಿ ಸೀಗಲ್ ನೆಲ್ಯಾಡಿ, ಉದ್ಯಮಿ ವಿ.ಎಚ್ ಅಶ್ರಪ್, ಪಟ್ಟಣ ಪಂಚಾಯತ್ ಸದಸ್ಯ ವಿಕೆಎಂ ಅಶ್ರಫ್, ಉದ್ಯಮಿ ಅಬೂಬಕ್ಕರ್ ಪುತ್ತು ಉಪ್ಪಿನಂಗಡಿ, ಶಾಕೀರ್ ಅಳಕೆಮಜಲು, ಕಲಂದರ್ ಪರ್ತಿಪ್ಪಾಡಿ, ಅಬ್ದುಲ್ ಅಝೀಝ್ ಸನ, ಡಿಎಂ ರಶೀದ್ ಉಕ್ಕುಡ, ಜಾಫರ್ ಖಾನ್, ಅಬೂಬಕ್ಕರ್ ಅನಿಲಕಟ್ಟೆ, ಉಬೈದ್ ವಿಟ್ಲ ಬಝಾರ್, ಎಂ.ಎಸ್ ಸಂಜೀವ ಗಜಾನನ ಮೊದಲಾದವರು ಉಪಸ್ಥಿತರಿದ್ದರು.
ಬಂಟ್ವಾಳ ಜಂಇಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ ಸ್ವಾಗತಿಸಿದರು. ಪ್ರಜ್ಞಾ ಒಡಿಲ್ನಾಳ, ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.