Saturday, June 13, 2026
spot_imgspot_img
spot_imgspot_img

ವಿಟ್ಲ: ರಸ್ತೆಯ ಅಂಚಿನಲ್ಲೇ ಅಪಾಯಕಾರಿ ಮರ; ಮರಕ್ಕೆ ಸಿಕ್ಕಿ ಹಾಕಿಕೊಂಡ ರಿಕ್ಷಾ – ಮರ ತೆರವುಗೊಳಿಸಲು ಆಗ್ರಹ

- Advertisement -
- Advertisement -

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ರಥಗದ್ದೆಯ ಪಕ್ಕದಲ್ಲೇ ಬಸವನಗುಡಿಗೆ ಹಾದುಹೋಗುವ ರಸ್ತೆಯಲ್ಲಿ ಅಪಾಯಕಾರಿ ಅಂಚಿನಲ್ಲಿ ಮಾವಿನ ಮರವಿದ್ದು ಸಾರ್ವಜನಿಕರು, ವಾಹನ ಸವಾರರು, ವಿದ್ಯಾರ್ಥಿಗಳು ಭಯಪಟ್ಟುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ರಸ್ತೆಗೆ ವಾಲಿಕೊಂಡು ಇರುವ ಮಾವಿನ ಮರ ಬೀಳುವ ಹಂತ ತಲುಪಿದೆ. ಈಗಾಗಲೇ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಆಟೋ ರಿಕ್ಷಾಗೆ ಮರದ ಕೊಂಬೆ ತಾಗಿ ಪಲ್ಟಿಯಾಗುವ ಹಂತ ತಲುಪಿತ್ತು. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇದೇ ರಸ್ತೆಯಿಂದ ಮಕ್ಕಳು, ವಾಹನ ಸವಾರರು ಹಾದು ಹೋಗುತ್ತಾರೆ. ಈ ಬಗ್ಗೆ ವಿಟ್ಲ ಪಟ್ಟಣ ಪಂಚಾಯತ್ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು, ವಾಹನ ಸವಾರರು ಆಗ್ರಹಿಸಿದ್ದಾರೆ.

- Advertisement -

Related news

error: Content is protected !!