


ವಿಟ್ಲ: ಗೋವಂಶದ ಬಲಿ / ಹತ್ಯೆ , ಅಕ್ರಮ ಗೋ ಸಾಗಾಟವಾಗದಂತೆ ಕ್ರಮ ವಹಿಸುವಂತೆ ಹಾಗೂ ಹಿಂದೂ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆ ಬರುವಂತಹ ಯಾವುದೇ ಕೃತ್ಯ ಆಗದಂತೆ ತಡೆಯಲು ವಿಶ್ವ ಹಿಂದೂಪರಿಷದ್ ಬಜರಂಗದಳ ವಿಟ್ಲ ಪ್ರಖಂಡದಿಂದ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020 ಹಾಗೂ ಕರ್ನಾಟಕ ಪ್ರಾಣಿ ಬಲಿ ನಿಷೇಧ 1959 (ತಿದ್ದು ಪಡಿ 1975) ಇದು ಜಾರಿಯಲ್ಲಿದ್ದು , ಅದರ ಪ್ರಕಾರ ಯಾವುದೇ ಗೋವಂಶ (ಯಾವುದೇ ವಯಸ್ಸಿನ ದನ, ಎತ್ತು , ಹೋರಿ ಕರು) ಗಳ ಬಲಿ/ ಕುರ್ಬಾನಿ ಹತ್ಯೆ ಮಾಡುವುದನ್ನು ನಿಷೇಧಿಸಲಾಗಿದೆ. ಜೂನ್ 29,30 ಮತ್ತು ಜುಲೈ 1 ರಂದು ಕುರ್ಬಾನಿಯ ಸಾಧ್ಯ ತೆಗಳಿದ್ದು , ಈ ತಾರಿಖೀನಂದು ಹಾಗೂ ಇತರೆ ದಿನಗಳಂದು ಯಾವುದೇ ರೀತಿಯ ಗೋವಂಶ ವಧೆ/ ಬಲಿ/ಕುರ್ಬಾನಿ/ಹತ್ಯೆ ಹಾಗೂ ಅಕ್ರಮ ಸಾಗಾಟವಾಗದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೇಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ವಿಟ್ಲ ವತಿಯಿಂದ ವಿಟ್ಲ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.