Saturday, April 27, 2024
spot_imgspot_img
spot_imgspot_img

ವಿಟ್ಲ: ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿದ ವಿಟ್ಲ ಪೊಲೀಸರು- ಪತ್ನಿಯ ಐಶಾರಾಮಿ ಜೀವನಕ್ಕೆ ಪರಾರಿಯಾದ ವಿಲ್ಫ್ರೆಡ್ ವೇಗಸ್!

- Advertisement -G L Acharya panikkar
- Advertisement -

ವಿಟ್ಲ: ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಹುಬ್ಬಳ್ಳಿಯಲ್ಲಿ ಪತ್ತೆ ಹಚ್ಚುವಲ್ಲಿ ವಿಟ್ಲ ಪೊಲೀಸ್ ಉಪನಿರೀಕ್ಷಕ ವಿನೋದ್ ರೆಡ್ಡಿ ಅವರ ತಂಡ ಯಶಸ್ವಿಯಾಗಿದೆ.

ವಿಟ್ಲ ಕಸಬಾ ಗ್ರಾಮದ ಕಾಶಿಮಠ ನಿವಾಸಿ ವಿಲ್‌ಪ್ರೇಡ್ ವೇಗಸ್ (48) ಪತ್ತೆಯಾದ ವ್ಯಕ್ತಿಯಾಗಿದ್ದಾರೆ. 2020ರ ನವೆಂಬರ್ 27ರಂದು ಮನೆಯಿಂದ ನಾಪತ್ತೆಯಾದ ಬಗ್ಗೆ ಪತ್ನಿ ಪ್ಲೋರೀನ್ ವೇಗಸ್ ರವರು ವಿಟ್ಲ ಠಾಣೆಗೆ ದೂರು ನೀಡಿದ್ದರು.

ಪತ್ನಿ ಪ್ಲೋರೀನ್ ವೇಗಸ್

ಪತ್ನಿಯ ವಿಪರೀತವಾದ ದುಂದು ವೆಚ್ಚ ಹಾಗೂ ಕೆಲಸದಲ್ಲಿ ತಪ್ಪು ಗುರುತಿಸಿ ನಿರಂತರ ಕಿರುಕುಳ ನೀಡುತ್ತಿದ್ದರು. ಬೇರೆಕಡೆಯಲ್ಲಿ ಕೆಲಸ ಮಾಡಬಾರದೆಂಬ ಉದ್ದೇಶದಿಂದ ವಿದ್ಯಾಬ್ಯಾಸದ ದಾಖಲೆ ಪತ್ರ, ಪಾಸ್ ಪೋರ್ಟ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್ ಸೇರಿ ಎಲ್ಲಾ ದಾಖಲೆಗಳನ್ನು ಬೆಂಕಿ ಇಟ್ಟು ನಾಶ ಪಡಿಸಿದ್ದಾರೆ. ಎಲ್ಲಾ ರೀತಿಯ ಕಿರುಕುಳವನ್ನು ಸಹಿಸಲಾಗದೇ ಮನೆ ಬಿಟ್ಟು ಹೋಗಿದ್ದಾಗಿ ವಿಟ್ಲ ಠಾಣೆಯಲ್ಲಿ ತಿಳಿಸಿದ್ದಾರೆ.

ಪೊಲೀಸರು ತಮ್ಮ ಕರ್ತವ್ಯವನ್ನು ಮಾಡುತ್ತಿದ್ದರೂ, ಪತಿಗೆ ನಿರಂತರ ಕಿರುಕುಳ ನೀಡುತ್ತಿದ್ದ ಪತ್ನಿಯೇ ಕರ್ನಾಟಕ ಉಚ್ಛನ್ಯಾಯಲಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸುವ ಮೂಲಕ ಪತಿಯನ್ನು ಹುಡುಕುವ ನಾಟಕಕ್ಕೆ ಮುಂದಾಗಿದ್ದಳು.

ಠಾಣೆಯಲ್ಲಿ ಪತ್ನಿಯಲ್ಲಿ ಮಾತನಾಡಲು ನಿರಾಕಣೆ ಮಾಡಿದ ವ್ಯಕ್ತಿ ಮನೆಗೂ ತೆರಳದೆ ನೆಮ್ಮದಿ ಇಲ್ಲದ ಕಾರಣ ಪತ್ನಿಯಲ್ಲಿ ವಿಟ್ಲ ಠಾಣೆಯಲ್ಲಿ ಮುಂದೆ ಹಿಂದೆ ಕೆಲಸ ಮಾಡಿದ ಹುಬ್ಬಳ್ಳಿಯಲ್ಲೇ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದ್ದಾರೆ.

- Advertisement -

Related news

error: Content is protected !!